Monday, September 28, 2026

BDA Apartments

Home Crime ಮಾಜಿ ಸಚಿವ ಡಾ.ಕೆ.ಸುಧಾಕರ್ ಹೆಸರಿನಲ್ಲಿ ವ್ಯಕ್ತಿಯಿಂದ ಮಹಿಳೆಗೆ 35 ಲಕ್ಷ ರೂ. ವಂಚನೆ: ದೂರು ದಾಖಲು.

ಮಾಜಿ ಸಚಿವ ಡಾ.ಕೆ.ಸುಧಾಕರ್ ಹೆಸರಿನಲ್ಲಿ ವ್ಯಕ್ತಿಯಿಂದ ಮಹಿಳೆಗೆ 35 ಲಕ್ಷ ರೂ. ವಂಚನೆ: ದೂರು ದಾಖಲು.

ಬೆಂಗಳೂರು,ಆಗಸ್ಟ್,2,2023(www.justkannada.in):  ಮಾಜಿ ಸಚಿವ ಡಾಕ್ಟರ್ ಕೆ ಸುಧಾಕರ್ ಅವರ ಹೆಸರಿನಲ್ಲಿ ವ್ಯಕ್ತಿಯೊಬ್ಬ ಮಹಿಳೆಗೆ  ಲಕ್ಷಾಂತರ ರೂಪಾಯಿಗಳ ವಂಚನೆ ಮಾಡಿದ್ದು ಈ ಕುರಿತು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರಣ್ಯಪುರ ನಿವಾಸಿ ಸೈಯದ್ ಯುನುಸ್ ವಿರುದ್ದ ಈ ಆರೋಪ ಕೇಳಿ ಬಂದಿದೆ.  ಮೆಡಿಕಲ್ ಸೀಟ್ ಕೊಡಿಸುವುದಾಗಿ ಲೋಕ ನಾಯಕಿ ಎಂಬ ಮಹಿಳೆ ಬಳಿ 35 ಲಕ್ಷ ಪಡೆದಿದ್ದಾನೆ. ನಾನು ಕೇಂದ್ರ ಸರ್ಕಾರದ ಉದ್ಯೋಗಿ ಆಗಿದ್ದೇನೆ ನನಗೆ ಮಿನಿಸ್ಟರ್ ಗೊತ್ತು ವೈದ್ಯಕೀಯ ಕಾಲೇಜಿನವರು ಕೂಡ ಗೊತ್ತಿದೆ. ಇಲಾಖೆಯಲ್ಲಿ ಪ್ರತಿಯೊಬ್ಬರೂ ಗೊತ್ತಿದ್ದಾರೆ ಎಂದು ಹೇಳಿ ವಂಚಿಸಿದ್ದಾನೆ. 

ಈತನ ಮಾತು ನಂಬಿ ಲೋಕ ನಾಯಕಿ ಎಂಬ ಮಹಿಳೆ 35 ಲಕ್ಷ ರೂ. ಹಣ ನೀಡಿದ್ದಾರೆ ಮಹಿಳೆಗೆ ಅನುಮಾನ ಬಂದು ಈ ಸಂದರ್ಭದಲ್ಲಿ ಹಣ ವಾಪಸ್ ಕೇಳಿದಾಗ ಈ ಸಂದರ್ಭದಲ್ಲಿ ಸಯ್ಯದ್ ಹಣ ಹಿಂದಿರುಗಿಸಲು ಹಿಂದೇಟು ಹಾಕಿದ್ದು, ಈ ಹಿನ್ನೆಲೆಯಲ್ಲಿ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: name -former minister- Dr. K. Sudhakar-35 lakhs – woman – Fraud