Friday, August 14, 2026

BDA Apartments

Home Front Page ಪಾರ್ಕಿಂಗ್ ಕಿರಿಕಿರಿ: ಸಿಎಂ ಸಿದ್ಧರಾಮಯ್ಯ ಅವರ ಕಾರು ಅಡ್ಡಗಟ್ಟಿ ದೂರು ನೀಡಿದ ವ್ಯಕ್ತಿ.

ಪಾರ್ಕಿಂಗ್ ಕಿರಿಕಿರಿ: ಸಿಎಂ ಸಿದ್ಧರಾಮಯ್ಯ ಅವರ ಕಾರು ಅಡ್ಡಗಟ್ಟಿ ದೂರು ನೀಡಿದ ವ್ಯಕ್ತಿ.

ಬೆಂಗಳೂರು, ಜುಲೈ, 27,2023(www.justkannada.in):  ಮನೆ ಮುಂದೆ ಪಾರ್ಕಿಂಗ್ ಕಿರಿಕಿರಿ ಉಂಟಾದ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರನ್ನ ಅಡ್ಡಗಟ್ಟಿ ಹಿರಿಯ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ.

ಸಿಎಂ ನಿವಾಸದ ಬಳಿಯ ರಸ್ತೆಗೆ ಬ್ಯಾರಿಕೇಡ್ ಹಾಕಿದ್ದಕ್ಕೆ ಸಿಎಂ ನಿವಾಸ ಎದುರುಗಡೆ ಇರುವ ಮನೆ ಮಾಲೀಕ  ಹಿರಿಯ ವ್ಯಕ್ತಿ ಸಿಎಂ ಸಿದ್ಧರಾಮಯ್ಯ ಕಾರಿಗೆ ಅಡ್ಡಗಟ್ಟಿ ಅಕ್ರೋಶ ಹೊರ ಹಾಕಿದ್ದಾರೆ.

ಸಿಎಂ ಭೇಟಿಗೆ ಬರುವ ವಾಹನಗಳು ನಮ್ಮ ಮನೆ ಮುಂದೆ ಹೇಗೆಬೇಕೋ ಹಾಗೆ ನಿಲ್ಲಿಸುತ್ತಾರೆ. ಈ ಬಗ್ಗೆ ಪೊಲೀಸರಿಗೆ ಹೇಳಿದರೂ ಪ್ರಯೋಜವಾಗಿಲ್ಲ. ಕಳೆದ 5 ವರ್ಷದಿಂದ ಹೀಗೆ ಆಗ್ತಿದೆ. ಇದನ್ನ ಸರಿಪಡಿಸಿ ಎಂದು ಸಿಎಂ ಬಳಿ ದೂರು ನೀಡಿದರು.

Key words: Parking – CM –Siddaramaiah- person – complained