Thursday, August 13, 2026

BDA Apartments

Home Front Page ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧದ ಪ್ರಕರಣ: ಹಿಂದೆ ಸರಿದ 10ನೇ ನ್ಯಾಯಮೂರ್ತಿ!

ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧದ ಪ್ರಕರಣ: ಹಿಂದೆ ಸರಿದ 10ನೇ ನ್ಯಾಯಮೂರ್ತಿ!

ಬೆಂಗಳೂರು, ಆಗಸ್ಟ್ 30, 2019: ‘ಹೊಸನಗರ ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತೀ ಸ್ವಾಮೀಜಿ ಆಡಳಿತದಲ್ಲಿ ಶ್ರೀ ಮಠದಲ್ಲಿ ಆರ್ಥಿಕ ಅವ್ಯವಹಾರ ನಡೆದಿದ್ದು ಅವರನ್ನು ಪೀಠದಿಂದ ಕೆಳಗಿಳಿಸಬೇಕು’ ಎಂದು ಕೋರಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯಿಂದ ನ್ಯಾಯಮೂರ್ತಿ ಪಿ.ಎಂ.ನವಾಜ್ ಹಿಂದೆ ಸರಿದಿದ್ದಾರೆ.

ಈ ಕುರಿತ ಪ್ರಕರಣ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ಹಾಗೂ ನ್ಯಾಯಮೂರ್ತಿ ಪಿ.ಎಂ.ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠದ ಮುಂದೆ ಪ್ರಕರಣ ವಿಚಾರಣೆಗೆ ನಿಗದಿಯಾಗಿತ್ತು.

ವಿಚಾರಣೆಗೆ ಪ್ರಕರಣವನ್ನು ಕರೆದಾಗ ನವಾಜ್ ಅವರು ತಾವು ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದರು. ಆದರೆ, ಕಾರಣ ತಿಳಿಸಲಿಲ್ಲ. ಪ್ರಕರಣವನ್ನು ಬೇರೊಂದು ನ್ಯಾಯಪೀಠದ ಎದುರು ವಿಚಾರಣೆಗೆ ನಿಗದಿಪಡಿಸಲು ರಿಜಿಸ್ಟ್ರಾರ್ ಅವರಿಗೆ ನ್ಯಾಯಪೀಠ ಸೂಚಿಸಿದೆ.

ಇದರಿಂದಾಗಿ ರಾಘವೇಶ್ವರ ಶ್ರೀಗಳ ವಿರುದ್ಧದ ವಿವಿಧ ಪ್ರಕರಣಗಳಲ್ಲಿ ಈವರೆಗೆ ಒಟ್ಟು ಹತ್ತು ಜನ ನ್ಯಾಯಮೂರ್ತಿಗಳು 16 ಬಾರಿ ಹಿಂದೆ ಸರಿದಂತಾಗಿದೆ.

ಇವರೆಲ್ಲಾ ಹಿಂದೆ ಸರಿದವರು

ನ್ಯಾಯಮೂರ್ತಿಗಳಾದ ಕೆ.ಎನ್.ಫಣೀಂದ್ರ, ರಾಮಮೋಹನ ರೆಡ್ಡಿ, ಎಂ.ಶಾಂತನಗೌಡರ, ಬಿ.ವೀರಪ್ಪ, ಎಚ್‌.ಜಿ.ರಮೇಶ್‌, ಪಿ.ಬಿ.ಭಜಂತ್ರಿ, ಅಧೀನ ನ್ಯಾಯಾಲಯದ ನ್ಯಾಯಾಧೀಶೆ ಎಚ್‌.ಜಿ.ವಿಜಯಕುಮಾರಿ, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎಸ್‌.ಕೆ.ಮುಖರ್ಜಿ, ಎಸ್‌.ಜಿ.ಪಂಡಿತ್ ಮತ್ತು ಪಿ.ಎಂ.ನವಾಜ್‌.

ಕೃಪೆ: ಪ್ರಜಾವಾಣಿ