Sunday, August 23, 2026

BDA Apartments

Home Front Page ಜನಾದೇಶ ಸಿಕ್ಕ ‘ಕೈ’ ಕಾಂಗ್ರೆಸ್ ಸರ್ಕಾರ ಸ್ಥಿರ, ಸುಭದ್ರ, ಯಾರಿಂದಲೂ ಪತನ ಸಾಧ್ಯವಿಲ್ಲ: ಸಚಿವ...

ಜನಾದೇಶ ಸಿಕ್ಕ ‘ಕೈ’ ಕಾಂಗ್ರೆಸ್ ಸರ್ಕಾರ ಸ್ಥಿರ, ಸುಭದ್ರ, ಯಾರಿಂದಲೂ ಪತನ ಸಾಧ್ಯವಿಲ್ಲ: ಸಚಿವ ಕೆ.ಎಚ್.ಮುನಿಯಪ್ಪ

ಬೆಂಗಳೂರು, ಜುಲೈ 26, 2023 (www.justkannada.in): ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸ್ಥಿರವಾಗಿದ್ದು, ಪತನ ಮಾಡಲು ಸಾಧ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌. ಮುನಿಯಪ್ಪ ಹೇಳಿದ್ದಾರೆ.

ಕಾಂಗ್ರೆಸ್‌ ಸರ್ಕಾರಕ್ಕೆ ರಾಜ್ಯದ ಜನರು 135 ಸ್ಥಾನಗಳ ಬೃಹತ್ ಜನಾದೇಶ ನೀಡಿದ್ದು, ಸರ್ಕಾರಕ್ಕೆ ಎರಡು ತಿಂಗಳಷ್ಟೇ ಬಾಕಿಯಿರುವ ಈ ಹೊತ್ತಿನಲ್ಲಿ ಸರಕಾರವನ್ನು ಅಸ್ಥಿರಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.

ಹರಿಪ್ರಸಾದ್ ಹಲವಾರು ದಶಕಗಳಿಂದ ಅತ್ಯಂತ ಶಿಸ್ತಿನ ಕಾಂಗ್ರೆಸ್ ಸೈನಿಕರಲ್ಲಿ ಒಬ್ಬರು. ಅವರು ಕಾಂಗ್ರೆಸ್‌ ದನಿಯಾಗಿದ್ದಾರೆ. ಆದರೆ ಅವರು ಕಾಂಗ್ರೆಸ್ ಪಕ್ಷ ಅಥವಾ ಅದರ ನಾಯಕತ್ವಕ್ಕೆ ಯಾವುದೇ ಹಾನಿಯನ್ನುಂಟುಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಶಾಸಕರು ಸರ್ಕಾರದಲ್ಲಿ ಯಾವುದೇ ಅಸಮಾಧಾನ ವ್ಯಕ್ತಪಡಿಸಿಲ್ಲ. ಶಾಸಕರಿಗೆ ಕೆಲವು ದೂರುಗಳಿರುತ್ತವೆ ಮತ್ತು ಅಂತಹ ದೂರುಗಳನ್ನು ಸಿಎಂ ಸಮರ್ಥವಾಗಿ ನಿಭಾಯಿಸುತ್ತಾರೆ ಎಂದಿದ್ದಾರೆ.