Sunday, September 20, 2026

BDA Apartments

ಮಾಜಿ ಶಾಸಕ ವಾಸುಗೆ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಯ ತೂಗುಗತ್ತಿ BDA JK_Adv BDA Adv
Home Front Page ಮಾಜಿ ಶಾಸಕ ವಾಸುಗೆ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಯ ತೂಗುಗತ್ತಿ.

ಮಾಜಿ ಶಾಸಕ ವಾಸುಗೆ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಯ ತೂಗುಗತ್ತಿ.

ಮೈಸೂರು,ಜುಲೈ,21,2023(www.justkannada.in): ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಮಾಜಿ ಶಾಸಕ ಪಿ. ವಾಸು ಅವರಿಗೆ  ಕಾಂಗ್ರೆಸ್ ಶಿಸ್ತುಪಾಲನ ಸಮಿತಿ ನೋಟಿಸ್ ನೀಡಿದ್ದು ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಯ ತೂಗುಗತ್ತಿಯಲ್ಲಿ ವಾಸು ಇದ್ದಾರೆ.

ಕಾಂಗ್ರೆಸ್ ಶಿಸ್ತುಪಾಲನ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಅವರು ಪತ್ರ ಬರೆದಿದ್ದು,  ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದೀರಿ. ಚಾಮರಾಜ ಕ್ಷೇತ್ರ ಅಧಿಕೃತ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ್ದೀರಿ. ಈ ಬಗ್ಗೆ ಕೆಪಿಸಿಸಿಗೆ ಲಿಖಿತ ಪತ್ರ ಬಂದಿದೆ. ನಿಮಗೆ ಪತ್ರ ಬಂದ 7 ದಿನಗಳ ಒಳಗೆ ಲಿಖಿತ ವಿವರಣೆ ಕೊಡಿ ಎಂದು ಸೂಚನೆ ನೀಡಿದ್ದಾರೆ.ಮಾಜಿ ಶಾಸಕ ವಾಸುಗೆ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಯ ತೂಗುಗತ್ತಿ vasu

ವಾಸುರಿಗೆ ಪಕ್ಷದಿಂದ ಗೇಟ್ ಪಾಸ್ ಕೊಡಿಸಲು ಸಿಎಂ ಸಿದ್ದರಾಮಯ್ಯ ಬೆಂಬಲಿಗರು ಶತಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದ್ದು ಈಗಾಗಲೇ ಟಿಕೆಟ್ ಕೈ ತಪ್ಪಿಸಿ ಮೇಲುಗೈ ಸಾಧಿಸಿದ್ದರು. ಇದೀಗ ವಾಸು ಪಕ್ಷದಿಂದಲೂ ಉಚ್ಚಾಟನೆ ಆಗುತ್ತಾರಾ ಕಾದು ನೋಡಬೇಕಿದೆ.

Key words: Former MLA –Vasu- expelled –Congress- party-notice