Wednesday, August 12, 2026

BDA Apartments

Home Front Page ಪದವಿ ಪರೀಕ್ಷೆ ಮುಂದೂಡಿಕೆಗೆ ಆಗ್ರಹ: ಮೈಸೂರಿನಲ್ಲಿ ಮುಂದುವರೆದ ವಿದ್ಯಾರ್ಥಿಗಳ ಪ್ರತಿಭಟನೆ.

ಪದವಿ ಪರೀಕ್ಷೆ ಮುಂದೂಡಿಕೆಗೆ ಆಗ್ರಹ: ಮೈಸೂರಿನಲ್ಲಿ ಮುಂದುವರೆದ ವಿದ್ಯಾರ್ಥಿಗಳ ಪ್ರತಿಭಟನೆ.

ಮೈಸೂರು,ಜುಲೈ,20,2023(www.justkannada.in):  ಪದವಿ ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿ ಮೈಸೂರಿನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ  ಇಂದು ಕೂಡ ಮುಂದುವರೆದಿದೆ.

ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಹಾಲ್ ಬಳಿಯಲ್ಲಿ ಇಂದು  ಮೈಸೂರಿನ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು  ಎಐಡಿಎಸ್ಒ ಸಂಘಟನೆಯ ಸಂಯುಕ್ತಾಶ್ರಯದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಪದವಿ ಕಾಲೇಜುಗಳಲ್ಲಿ ಕೇವಲ 2 ತಿಂಗಳು ಮಾತ್ರ ತರಗತಿಗಳು ನಡೆದಿವೆ. ವಿಧಾನಸಭೆ ಚುನಾವಣೆಗಾಗಿ ಕಾಲೇಜಿನ ಕಟ್ಟಡಗಳನ್ನು ಬಳಸಿಕೊಳ್ಳಲಾಗಿತ್ತು. ಹೀಗಾಗಿ ಪಾಠಗಳು ಸಮರ್ಪಕವಾಗಿ ನಡೆದಿಲ್ಲ. ಇದುವರೆಗೆ ಪಠ್ಯಕ್ರಮವೂ ಲಭ್ಯವಾಗಿಲ್ಲ. ಭಾನುವಾರ ಕೂಡ ಪರೀಕ್ಷೆಗಳನ್ನು ನಡೆಸುತ್ತಿರುವುದು ಸರಿಯಾದ ಕ್ರಮವಲ್ಲ. ಕೇವಲ ಒಂದು ವಾರದಲ್ಲಿ ಎಲ್ಲಾ ಪರೀಕ್ಷೆಗಳನ್ನು ಬರೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಪದವಿ ಪರೀಕ್ಷೆಯನ್ನು 15 ದಿನಗಳ ಮಟ್ಟಿಗಾದರೂ ಮುಂದೂಡಬೇಕು. ಪರೀಕ್ಷೆ ಮುಂದೂಡಿಕೆ ಬಗ್ಗೆ ಇಂದೇ ಸುತ್ತೋಲೆ ಹೊರಡಿಸುವಂತೆ ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.  ಕಳೆದ ಸೋಮವಾರವೂ ಕೂಡ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.

Key words: postponement – degree- examination-Student -protest – Mysore.