Saturday, August 15, 2026

BDA Apartments

Home Front Page ಗೃಹಲಕ್ಷ್ಮಿ ಯೋಜನೆ ಸ್ವಾಗತ ಮಾಡಿದ ಮಂಗಳಮುಖಿಯರು.

ಗೃಹಲಕ್ಷ್ಮಿ ಯೋಜನೆ ಸ್ವಾಗತ ಮಾಡಿದ ಮಂಗಳಮುಖಿಯರು.

ಮೈಸೂರು,ಜುಲೈ,19,2023(www.justkannada.in):  ಇಂದಿನಿಂದ ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಅನುಷ್ಠಾನವಾಗಲಿದ್ದು ಸಿಎಂ ಸಿದ್ಧರಾಮಯ್ಯ ಚಾಲನೆ ನೀಡಲಿದ್ದಾರೆ. ಈ ಮಧ್ಯೆ ಗೃಹಲಕ್ಷ್ಮಿ ಯೋಜನೆಯನ್ನ ಮಂಗಳಮುಖಿಯರು ಸ್ವಾಗತ ಮಾಡಿದ್ದಾರೆ.

ಈ ಕುರಿತು ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲೈಂಗಿಕ ಅಲ್ಪ ಸಂಖ್ಯಾತರಾದ ಚಾಂದಿನಿ ಮತ್ತು ಸವಿತಾ, ಗೃಹಲಕ್ಷ್ಮಿ ಯೋಜನೆಗೆ ತಮ್ಮನ್ನು ಸೇರ್ಪಡೆ ಮಾಡಿರುವುದಕ್ಕೆ ಸಂತೋಷವಾಗಿದೆ. ಕಳೆದ ಹಲವಾರು ವರ್ಷಗಳಿಂದ ಶೋಷಣೆಗೆ ಒಳಗಾಗಿದ್ದ ನಮ್ಮನ್ನು ಸರ್ಕಾರ ಗುರ್ತಿಸಿದೆ. ಈಗಾಗಲೇ ಶಕ್ತಿ ಯೋಜನೆಯಡಿ ಬಸ್ ನಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದೇವೆ. ಇದೀಗ ಗೃಹಲಕ್ಷ್ಮಿ ಯೋಜನೆ ಅನುಷ್ಠಾನವಾಗುತ್ತಿರುವುದು ಸಂತಸ ತಂದಿದೆ ಎಂದರು.

ನಮ್ಮ ಸಮುದಾಯದ ಬಹುತೇಕ ಮಂದಿಗೆ ಇದರ ಪ್ರಯೋಜನ ಸಿಗಲಿದೆ. ತಾಂತ್ರಿಕ ಕಾರಣದಿಂದಾಗಿ ಕೆಲವರಿಗೆ ಯೋಜನೆಯ ಲಾಭ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುತ್ತೇವೆ ಎಂದರು.

Key words: Mangalmukhi- welcomed – Government scheme-Grilahakshmi Yojana