Monday, September 21, 2026

BDA Apartments

ಕರ್ತವ್ಯ ಲೋಪ ಆರೋಪ: ಮೂವರು ಪಿಡಿಒಗಳು ಸಸ್ಪೆಂಡ್ BDA JK_Adv BDA Adv
Home Front Page ಕರ್ತವ್ಯ ಲೋಪ ಆರೋಪ: ಮೂವರು ಪಿಡಿಒಗಳು ಸಸ್ಪೆಂಡ್.

ಕರ್ತವ್ಯ ಲೋಪ ಆರೋಪ: ಮೂವರು ಪಿಡಿಒಗಳು ಸಸ್ಪೆಂಡ್.

ಹಾಸನ,ಜುಲೈ,13,2023(www.justkannada.in): ಕರ್ತವ್ಯ ಲೋಪವೆಸಗಿದ ಆರೋಪದ ಮೇಲೆ ಮೂವರು ಪಿಡಿಒಗಳನ್ನು  ಸಸ್ಪೆಂಡ್ ಮಾಡಿ ಜಿಲ್ಲಾ ಪಂಚಾಯತ್ ಸಿಇಓ ಪೂರ್ಣಿಮಾ ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ 18ಎ ನಿವೇಶನವನ್ನು ಖಾಸಗೀ ವ್ಯಕ್ತಿಗೆ ಮಾಡಿಕೊಟ್ಟಿದ್ದಾರೆಂಬ ಆರೋಪ ಹಿನ್ನೆಲೆ ಮೂವರು ಪಿಡಿಓಗಳ ಸಸ್ಪೆಂಡ್  ಮಾಡಿ ಜಿಲ್ಲಾ ಪಂಚಾಯತ್ ಸಿಇಓ ಪೂರ್ಣಿಮಾ ಆದೇಶಿಸಿದ್ದಾರೆ.

ಚನ್ನರಾಯಪಟ್ಟಣ ತಾಲ್ಲೂಕಿನ ಬಳದರೆ ಗ್ರಾಮಪಂಚಾಯತ್ ನಲ್ಲಿ ಕೆಲಸ ಮಾಡಿದ್ದ ಮೂವರು ಪಿಡಿಓಗಳು ಅಮಾನತುಗೊಂಡಿದ್ದಾರೆ. ಹಾಲಿ ಡಿ.ಕಾಳೇನಹಳ್ಳಿ ಪಿಡಿಓ ಆಗಿರುವ ಸಿ.ಎನ್.ನವೀನ್, ಕೆಂಬಾಳು/ಬಾಗೂರು ಪಿಡಿಒ ಕೃಷ್ಣೇಗೌಡ, ಡಿ.ಬಳದರೆ ಹಾಗೂ ದಿಂಡಗೂರು ಪಿಡಿಓ ಆಗಿರುವ ರಾಮಸ್ವಾಮಿ ಅವರನ್ನ ಅಮಾನತು ಮಾಡಲಾಗಿದೆ.

Key words: Alleged-dereliction –duty- Three- PDO- suspended.