Thursday, September 17, 2026

BDA Apartments

Home Front Page ಅಡ್ಜಸ್ಟ್ ಮೆಂಟ್ ರಾಜಕಾರಣಿ ಅಂತಾ ಪ್ರೂವ್ ಮಾಡಿದ್ರೆ ಅಂದೇ ರಾಜಕೀಯ ನಿವೃತ್ತಿ-ವಿಪಕ್ಷಗಳ ಆರೋಪಕ್ಕೆ ಸಿಎಂ ಸಿದ್ಧರಾಮಯ್ಯ...

ಅಡ್ಜಸ್ಟ್ ಮೆಂಟ್ ರಾಜಕಾರಣಿ ಅಂತಾ ಪ್ರೂವ್ ಮಾಡಿದ್ರೆ ಅಂದೇ ರಾಜಕೀಯ ನಿವೃತ್ತಿ-ವಿಪಕ್ಷಗಳ ಆರೋಪಕ್ಕೆ ಸಿಎಂ ಸಿದ್ಧರಾಮಯ್ಯ ತಿರುಗೇಟು.

ಬೆಂಗಳೂರು,ಜುಲೈ,12,2023(www.justkannada.in):  ಸದನದಲ್ಲಿ ಇಂದು  ಹೊಂದಾಣಿಕೆ ರಾಜಕಾರಣಿ ಎಂದು ತಮ್ಮ ವಿರುದ್ಧ ಆರೋಪ ಮಾಡಿದ ವಿರೋಧ ಪಕ್ಷದ ಸದಸ್ಯರಿಗೆ ತಿರುಗೇಟು ನೀಡಿದ ಸಿಎಂ ಸಿದ್ಧರಾಮಯ್ಯ, ಅಡ್ಜಸ್ಟ್ ಮೆಂಟ್ ರಾಜಕಾರಣಿ ಅಂತಾ ಪ್ರೂವ್ ಮಾಡಿದ್ರೆ ಅಂದೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.

ಸದನದಲ್ಲಿ ಮಾತನಾಡಿದ ಸಿಎಂ ಸಿದ‍್ಧರಾಮಯ್ಯ ಅವರು,  ಬಿಎಸ್ ಯಡಿಯೂರಪ್ಪ, ಆರ್ ವಿ ದೇಶಪಾಂಡೆ ಮತ್ತು ಬಿಆರ್ ಪಾಟೀಲ್ ಮೊದಲಾದ ನಾಯಕರೊಂದಿಗೆ ವಿಧಾನ ಸಭೆಗೆ ಬಂದ ತಾವು ಹಲವಾರು ವರ್ಷಗಳ ಕಾಲ ವಿರೋಧ ಪಕ್ಷದಲ್ಲಿದ್ದರೂ ಯಾವುದೇ ಪಕ್ಷ ಅಥವಾ ಸರ್ಕಾರದೊಂದಿಗೆ ಅಡ್ಜಸ್ಟ್ ಮೆಂಟ್ ರಾಜಕಾರಣ ಮಾಡಿಲ್ಲ. ಅಂತಹ ಒಂದೇ ಒಂದು ನಿದರ್ಶನ ತೋರಿಸಿದರೆ ಕೂಡಲೇ ರಾಜಕೀಯದಿಂದ ನಿವೃತ್ತಿ ಘೋಷಿಸುತ್ತೇನೆ ಎಂದರು.

ಗೃಹ ಜ್ಯೋತಿ ಯೋಜನೆ ಕುರಿತು ಮಾತಾಡಿದ  ಸಿಎಂ ಸಿದ್ಧರಾಮಯ್ಯ, 200 ಯೂನಿಟ್ ವರೆಗೆ ವಿದ್ಯುತ್ ಉಚಿತ ಅಂತ ಹೇಳಿದ್ದೇವೆ.  ಒಂದು ಕುಟುಂಬ ಸರಾಸರಿ 199 ಯೂನಿಟ್ ಬಳಸುತ್ತಿದ್ದರೆ ಆ ಕುಟುಂಬಕ್ಕೆ ಅಷ್ಟು ಯೂನಿಟ್ ವರೆಗೆ ವಿದ್ಯುತ್ ಉಚಿತ ಸಿಗುತ್ತದೆ, ಹಾಗೆಯೇ 80 ಯೂನಿಟ್ ಬಳಸುವವರಿಗೆ 80 ಯೂನಿಟ್ ಮಾತ್ರ ಉಚಿತ ಸಿಗುತ್ತದೆ ಎಂದು ಹೇಳಿದರು.

Key words: CM Siddaramaiah – opposition- accusation -adjustment -politician