Friday, August 7, 2026

BDA Apartments

Home Front Page ಪೆನ್ ಡ್ರೈವ್ ರಹಸ್ಯ ಈಗಲೇ ಬಹಿರಂಗಪಡಿಸಲಿ: ನಾವಂತೂ ಸ್ಪಷ್ಟ- ಹೆಚ್ ಡಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ...

ಪೆನ್ ಡ್ರೈವ್ ರಹಸ್ಯ ಈಗಲೇ ಬಹಿರಂಗಪಡಿಸಲಿ: ನಾವಂತೂ ಸ್ಪಷ್ಟ- ಹೆಚ್ ಡಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು.

ಕಲ್ಬುರ್ಗಿ,ಜುಲೈ,,8,2023(www.justkannada.in):   ರಾಜ್ಯ ಸರ್ಕಾರದ ಭ್ರಷ್ಟಾಚಾರದ ಸಾಕ್ಷ್ಯ ಇರುವ ಪೆನ್ ಡ್ರೈವ್ ಸೋಮವಾರ ಬಹಿರಂಗ ಮಾಡುತ್ತೇನೆ ಎಂದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ,  ಹೆಚ್.ಡಿ ಕುಮಾರಸ್ವಾಮಿ ಅವರು ಪೆನ್ ಡ್ರೈವ್ ಬಹಿರಂಗ ಮಾಡಲಿ. ಏಕೆ ಸುಮ್ಮನೇ ಸೋಮವಾರ ಅಂತಿದ್ದಾರೆ.  ಅವತ್ತು ಟೈಮ್ ಚೆನ್ನಾಗಿದೆ ಅಂತಾನಾ…?  ಕುಮಾರಸ್ವಾಮಿ ಪೆನ್ ಡ್ರೈವ್ ಬಹಿರಂಗಪಡಿಸಲಿ ನಾವಂತೂ ಸ್ಪಷ್ಟವಾಗಿದ್ದೇವೆ. ಇಂತಹ ವಿಚಾರದಲ್ಲಿ ಲೋಕಾಯುಕ್ತ ಇದೆ. ದೂರು ನೀಡಲಿ ಎಂದರು.

ಬಿಜೆಪಿ ಭ್ರಷ್ಟಾಚಾರದ ಬಗ್ಗೆ ದಾಖಲೆ ಇಟ್ಟಕೊಂಡೇ ನಾವು ಮಾತನಾಡಿದವು. ಈಗ ಆ ಎಲ್ಲಾ ಪ್ರಕರಣಗಳನ್ನ ತನಿಖೆಗೆ ವಹಿಸಿದ್ದೇವೆ. ಕುಮಾರಸ್ವಾಮಿ ಅವರೂ ಸಹ  ದಾಖಳೆಗಳು ಇದ್ದರೇ ಕೊಡಲಿ ತನಿಖೆ ಮಾಡಿಸೋಣ ಎಂದರು.

Key words: pen drive-HD Kumaraswamy- Minister- Priyank Kharge