Sunday, August 23, 2026

BDA Apartments

Home Front Page ಸಿದ್ಧರಾಮಯ್ಯ ಕುರ್ಚಿ ಖಾಲಿ ಮಾಡಲ್ಲ: ಡಿಕೆಶಿ ಸಿಎಂ ಆಗಲ್ಲ: ‘ಕೈ’ ಸರ್ಕಾರದ ಬಗ್ಗೆ ಭವಿಷ್ಯ ನುಡಿದ...

ಸಿದ್ಧರಾಮಯ್ಯ ಕುರ್ಚಿ ಖಾಲಿ ಮಾಡಲ್ಲ: ಡಿಕೆಶಿ ಸಿಎಂ ಆಗಲ್ಲ: ‘ಕೈ’ ಸರ್ಕಾರದ ಬಗ್ಗೆ ಭವಿಷ್ಯ ನುಡಿದ ಯತ್ನಾಳ್.

ಬೆಂಗಳೂರು,ಜುಲೈ,4,2023(www.justkannada.in): ಸಿದ್ಧರಾಮಯ್ಯ ಸಿಎಂ ಕುರ್ಚಿ ಖಾಲಿ ಮಾಡಲ್ಲ.  ಡಿಕೆ ಶಿವಕುಮಾರ್ ಸಿಎಂ ಆಗಲ್ಲ. ಡಿಸೆಂಬರ್ ವೇಳೆಗೆ  ಕಾಂಗ್ರೆಸ್ ಸರ್ಕಾರದ ವಾರಂಟಿ ಮುಗಿಯುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭವಿಷ್ಯ ನುಡಿದರು.

ಇಂದು ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ ಜನರಿಗೆ ಮೋಸ ಮಾಡಿದೆ. ಉಚಿತ ಖಚಿತ ಎಂದವರು ಮನೆಗೆ ಹೋಗೋದು ನಿಶ್ಚಿತ. ಎಲ್ಲರಿಗೂ ದೋಖಾ ಮಾಡಿದ ಕಂಪನಿ ಕಾಂಗ್ರೆಸ್. ಅಧಿಕಾರಕ್ಕೆ ಬರುವ ಮುನ್ನ ಉಚಿತ ಖಚಿತ ನಿಶ್ಚಿತ ಎಂದು ಹೇಳಿದರು. ಆದರೆ ಈಗ ಯಾವುದೇ ಭರವಸೆಗಳನ್ನ ಈಡೇರಿಸಿಲ್ಲ. ಸಿಎಂ ಸಿದ್ಧರಾಮಯ್ಯಗೆ  ಮಾತನಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು.

ಕಾಂಗ್ರಸ್ ನಿಂದ ಮಕ್ಮಲ್ ಟೋಪಿ ಅಂತಾ ಜನರಿಗೆ ಗೊತ್ತಾಗಿದೆ . ಕರ್ನಾಟಕದಲ್ಲಿ ಪಾಕ್ ನಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಕಾಂಗ್ರೆಸ್ ಸರ್ಕಾರದಿಂದ ಸರ್ಕಾರಿ ನೌಕರರಿಗಗೂ ಸಂಬಳ ಕೊಡಲು ಆಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಲೋಕಸಭೆಯವರೆಗೆ ಮಾತ್ರ ಈ ಗ್ಯಾರಂಟಿ ಯೋಜನೆಗಳು  ಇರ್ತಾವೆ ಎಂದು ಯತ್ನಾಳ್ ತಿಳಿಸಿದರು.

Key words: Siddaramaiah CM- chair –DK shivakumar-BJP-mla-Basanagowada patil Yatnal