ಲಂಚ ಪಡೆದ ಪ್ರಕರಣದಲ್ಲಿ ವೈದ್ಯೆ ಅಮಾನತು: ಮೈಸೂರು ಡಿಹೆಚ್ ಒ ಪ್ರಸಾದ್ ಸ್ಪಷ್ಟನೆ.

ಮೈಸೂರು,ಜುಲೈ,4,2023(www.justkannada.in):  ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಶಾಂತಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಕೋಮಲರನ್ನ ಅಮಾನತು ಮಾಡಲಾಗಿದೆ ಎಂದು   ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಪ್ರಸಾದ್ ತಿಳಿಸಿದರು.

ಈ ಕುರಿತು ಮಾತನಾಡಿ ಸ್ಪಷ್ಟನೆ ನೀಡಿದ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಪ್ರಸಾದ್,  ಶಾಂತಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಕೋಮಲ ಎಂಬುವರ ಮೇಲೆ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಹಣ ಪಡೆಯುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಈ ವಿಚಾರವಾಗಿ ನಮ್ಮ ಹಿರಿಯ ಅಧಿಕಾರಿಗಳ ತಂಡ ಪ್ರಾಥಮಿಕ ಹಂತದ ತನಿಖೆ ನಡೆಸಿತ್ತು.

ಮೇಲ್ನೋಟಕ್ಕೆ ಈ ಆರೋಪ ಸಾಬೀತ್ತಾಗಿತ್ತು. ಆ ವರದಿಯನ್ನ ನಾವು ಕಮಿಷನರ್ ಗೆ ಕಳುಹಿಸಿದ್ದೆವು. ಆ ವರದಿ ಬೆನ್ನಲ್ಲೇ ಕಮಿಷನರ್ ರವರು ಅಮಾನತು ಆದೇಶ ಹೊರಡಿಸಿದ್ದಾರೆ. ಸದ್ಯ ವೈದ್ಯೆ ಕೋಮಲರ ವಿಚಾರಣೆ ಬಾಕಿಯಿರಿಸಿ ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.

Key words: Doctor -suspended –bribery- case- Mysore -DHO -Prasad -clarified.