Sunday, August 9, 2026

BDA Apartments

Home Front Page ಬಿಜೆಪಿಯವರದ್ದು ಮನೆಯೊಂದು ನೂರು ಬಾಗಿಲು- ಸಚಿವ ಎಂ.ಬಿ ಪಾಟೀಲ್ ಲೇವಡಿ.

ಬಿಜೆಪಿಯವರದ್ದು ಮನೆಯೊಂದು ನೂರು ಬಾಗಿಲು- ಸಚಿವ ಎಂ.ಬಿ ಪಾಟೀಲ್ ಲೇವಡಿ.

ಬೆಂಗಳೂರು,ಜೂನ್,29,2023(www.justkannada.in):  ಬಿಜೆಪಿಯವರದ್ದು ಮನೆಯೊಂದು ನೂರು ಬಾಗಿಲು ಆಗಿದೆ. ಬಿಜೆಪಿ ಪಕ್ಷ ಛಿದ್ರ ಛಿದ್ರ ಆಗಿದ್ದು, ಬಿಜೆಪಿಯವರನ್ನ ಜನ ತಿರಸ್ಕಾರ ಮಾಡಿದ್ದಾರೆ. ಸರಿಯಾದ ಪಾಠ ಕಲಿಸಿದ್ದಾರೆ, ಶಿಕ್ಷೆ ಕೊಟ್ಟಿದ್ದಾರೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಲೇವಡಿ ಮಾಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಎಂ.ಬಿ ಪಾಟೀಲ್, ರಾಜ್ಯದಲ್ಲಿ ಬಿಜೆಪಿಯ ಅಂತಿಮ ಘಟ್ಟ ತಲುಪಿದೆ. ಎಷ್ಟೇ ಫೆವಿಕಾಲ್ ಹಾಕಿದರೂ ಕೂಡ ಬಿಜೆಪಿ ಜೋಡಿಸಲು ಆಗುವುದಿಲ್ಲ. ಪಾಪ ನಮ್ಮ ಗ್ಯಾರಂಟಿಗಳಿಂದ ಬಿಜೆಪಿಯವರಿಗೆ ತೊಂದರೆ ಆಗುತ್ತಿದೆ. ಬಿಜೆಪಿಯವರು ಒಂದೊಂದು ತರ ಮಾತಾಡುತ್ತಿದ್ದಾರೆ. ಬಿಜೆಪಿಯವರು 40% ಕಮಿಷನ್ ಹೊಡೆಯೋದು ಬಿಟ್ಟು ಬೇರೇನೂ ಮಾಡಿಲ್ಲ. ಈಗ ಅವರಿಗೆ ಕೆಲಸ ಇಲ್ಲ ಎಂದು ವ್ಯಂಗ್ಯವಾಡಿದರು.

ಅಕ್ಕಿ ಇದ್ರೂ ಕೇಂದ್ರ ಸರ್ಕಾರ ಕೊಡದೇ ಮೋಸ ಮಾಡಿದೆ. ಹೀಗಾಗಿ  ಪ್ರತಿಯೊಬ್ಬರಿಗೆ 170 ರೂ. ಹಣ ಹಾಕುತ್ತೇವೆ. ಇದೇ ಸಿಟಿ ರವಿ ಅಕ್ಕಿ ಇಲ್ಲ ಅಂದ್ರೆ ಹಣ ಕೊಡಿ ಎಂದು ಹೇಳಿದರು. ಈಗ ನಾವು ಹಣವನ್ನೇ ಕೊಡ್ತಿದ್ದೀವಿ ಬೇರೆ ರಾಜ್ಯದವರು ಒಂದು ತಿಂಗಳಿಗೆ ಮಾತ್ರ ಕೊಡುತ್ತೇವೆ ಎಂದರು.

Key words: BJP- house – 100 doors – Minister -MB Patil