Saturday, October 3, 2026

BDA Apartments

Home Front Page 5ಕೆಜಿ ಅಕ್ಕಿಯೋ..? 10 ಕೆಜಿ ಅಕ್ಕಿಯೋ ಸ್ಪಷ್ಟಪಡಿಸಿ-ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹ.

5ಕೆಜಿ ಅಕ್ಕಿಯೋ..? 10 ಕೆಜಿ ಅಕ್ಕಿಯೋ ಸ್ಪಷ್ಟಪಡಿಸಿ-ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹ.

ಹುಬ್ಬಳ್ಳಿ,ಜೂನ್,26,2023(www.justkannada.in):  ಈಗಾಗಲೇ ರಾಜ್ಯದ ಜನರಿಗೆ ಕೇಂದ್ರ ಸರ್ಕಾರ ತಲಾ 5 ಕೆಜಿ ಅಕ್ಕಿ ಕೊಡುತ್ತಿದ್ದು, ಕೇಂದ್ರದ ಅಕ್ಕಿ ಬಿಟ್ಟು 10 ಕೆಜಿ ಅಕ್ಕಿ ಕೊಡುವ ಬಗ್ಗೆ  ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ ಸ್ಪಷ್ಟಪಡಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,  ಕೇಂದ್ರ ಸರ್ಕಾರ ಪದೇ ಪದೇ 10 ಕೆಜಿ ಅಕ್ಕಿಗೆ ಅಡ್ಡಗಾಲು ಹಾಕುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಕೇಂದ್ರ 5 ಕೆಜಿ ಅಕ್ಕಿ ಕೊಡುತ್ತಿದೆ, ನಾವು 10 ಕೆಜಿ  ಅಕ್ಕಿ ಕೊಡುತ್ತೇವೆ ಅಂತ ಹೇಳಲಿ. ಅಕ್ಕಿ ಬೇಕಾದರೇ ಕೇಂದ್ರ ಸರ್ಕಾರದ ಬಳಿ ಕೇಳಬೇಕು. ನೈಸರ್ಗಿಕ ವಿಕೋಪ ಬಂದಾಗ ನಮಗೆ ಅಕ್ಕಿ ಸ್ಟಾಕ್ ಅವಶ್ಯಕವಿದೆ. ಹೀಗಾಗಿ ಕಾಂಗ್ರೆಸ್ ಮೊದಲು ಸುಳ್ಳು ಹೇಳುವುದನ್ನು ಬಿಡಬೇಕು ಎಂದು ಕಿಡಿಕಾರಿದರು.5ಕೆಜಿ ಅಕ್ಕಿಯೋ..? 10 ಕೆಜಿ ಅಕ್ಕಿಯೋ ಸ್ಪಷ್ಟಪಡಿಸಿ-ಕೇಂದ್ರ ಸಚಿವ ಪ್ರಹ್ಲಾದ್ ಜೋ...

Key words: 5 kg –10 kg – rice – Union Minister -Prahlad Joshi- demands.