Sunday, August 16, 2026

BDA Apartments

Home Front Page ಗೃಹ ಜ್ಯೋತಿ ಯೋಜನೆ: ಅರ್ಜಿ ಸಲ್ಲಿಕೆಗೆ ನಾಲ್ಕನೇ ದಿವೂ ಸರ್ವರ್ ಸಮಸ್ಯೆ

ಗೃಹ ಜ್ಯೋತಿ ಯೋಜನೆ: ಅರ್ಜಿ ಸಲ್ಲಿಕೆಗೆ ನಾಲ್ಕನೇ ದಿವೂ ಸರ್ವರ್ ಸಮಸ್ಯೆ

ಬೆಂಗಳೂರು, ಜೂನ್ 21, 2023 (www.justkannada.in): ಗೃಹ ಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದ್ದು, ನಾಲ್ಕನೇ ದಿವೂ ಸರ್ವರ್ ಸಮಸ್ಯೆ ಎದುರಾಗಿದೆ.

ರಾಜ್ಯದ ಹಲವಡೆ ಸರ್ವರ್ ಸಮಸ್ಯೆಯಿಂದಾಗಿ ಅರ್ಜಿ ಸಲ್ಲಿಸಲು ಹೋದವರು ಪರದಾಡುವಂತಾಗಿದೆ.

ಅರ್ಜಿ ಸಲ್ಲಿಸುವ ಗ್ರಾಹಕರು ಸೇವಾ ಸಿಂಧು ಪೋರ್ಟಲ್ https://sevasindhugs.karnataka.gov.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

ಇಂದೂ ಸಹ ಕೆಲವಡೆ ಸರ್ವರ್ ಡೌನ್ ಆದ ಪರಿಣಾಮ ಅರ್ಜಿ ಸಲ್ಲಿಸಲು ಪರದಾಡುವಂತಾಗಿದೆ.  ಕಳೆದ ಮೂರು ದಿನಗಳಲ್ಲಿ ಒಟ್ಟು 8,16,631 ಗ್ರಾಹಕರು ಹೆಸರು ನೋಂದಾಯಿಸಿದ್ದಾರೆ.

200 ಯೂನಿಟ್‌ ವರೆಗಿನ ಉಚಿತ ವಿದ್ಯುತ್‌ ಪಡೆಯುವ ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯ ಲಾಭ ಪಡೆಯಲು ಸಾರ್ವಜನಿಕರು ಭಾರೀ ಉತ್ಸುಕತೆ ತೋರುತ್ತಿದ್ದಾರೆ.