Monday, October 5, 2026

BDA Apartments

ನಾಡು ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣ: ಅವರ ಆಡಳಿತ ವೈಖರಿ ರ...
Home Front Page ಉಚಿತ ಅಕ್ಕಿ ನೀಡಲು ಆಗದಿದ್ದರೇ ಬಡವರ ಖಾತೆಗೆ ಹಣ ಹಾಕಿ; ಸಿಎಂ ಸಿದ್ಧರಾಮಯ್ಯಗೆ ಸಿ.ಟಿ ರವಿ...

ಉಚಿತ ಅಕ್ಕಿ ನೀಡಲು ಆಗದಿದ್ದರೇ ಬಡವರ ಖಾತೆಗೆ ಹಣ ಹಾಕಿ; ಸಿಎಂ ಸಿದ್ಧರಾಮಯ್ಯಗೆ ಸಿ.ಟಿ ರವಿ ಟಾಂಗ್.

ಬೆಂಗಳೂರು,ಜೂನ್,14,2023(www.justkannada.in): ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ಕೊಡುತ್ತಿಲ್ಲ. ಅಕ್ಕಿ ಸಂಗ್ರಹವಿದ್ದರೂ  ತಡೆಹಿಡಿದಿದೆ  ಎಂದು ಆರೋಪಿಸಿದ್ಧ ಸಿಎಂ ಸಿದ್ಧರಾಮಯ್ಯರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಟಾಂಗ್ ನೀಡಿದ್ದಾರೆ.

ಈ ಕುರಿತು ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಸಿ.ಟಿ ರವಿ,  ಬಡವರಿಗೆ ತಲಾ 5 ಕೆಜಿ ಅಕ್ಕಿ ಕೊಡುತ್ತಿರುವುದು ಕೇಂದ್ರ ಸರ್ಕಾರ. ಮೋದಿ ನೇತೃತ್ವದ ಕೇಂದ್ರ ಸರ್ಕಾರ 5 ಕೆಜಿ ಅಕ್ಕಿಕೊಡುತ್ತಿದೆ.   ಸಿಎಂರವರೆ ನಿಮ್ಮ ಪ್ರಣಾಳಿಕೆಯಂತೆ ತಲಾ 10 ಕೆಜಿ ಅಕ್ಕಿ ನೀಡಿ .ಅಕ್ಕಿ ನೀಡಲು ಆಗದಿದ್ದರೇ ಅಲ್ಲಿಯವರೆಗೆ ಬಡವರ ಖಾತೆಗೆ ಹಣ ಹಾಕಿ.  ಪ್ರತಿಯೊಬ್ಬ ಬಡವರ ಖಾತೆಗೆ  ತಲಾ 10ಕೆಜಿ ಅಕ್ಕಿಗೆ ಮಾರುಕಟ್ಟೆ ದರದಲ್ಲಿ ಹಣವನ್ನ ಹಾಕಿ  ಎಂದು ಆಗ್ರಹಿಸಿದರು.

Key words: not possible – free rice- money –poor-people- CT Ravi- Tong