Monday, October 5, 2026

BDA Apartments

ನಾಡು ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣ: ಅವರ ಆಡಳಿತ ವೈಖರಿ ರ...
Home Front Page ಅಧಿಕಾರಿಗಳ ಜೊತೆ ಸುರ್ಜೇವಾಲ ಸಭೆ ವಿಚಾರ: ರಾಜ್ಯಪಾಲರಿಗೆ ಬಿಜೆಪಿ ನಿಯೋಗದಿಂದ ದೂರು.

ಅಧಿಕಾರಿಗಳ ಜೊತೆ ಸುರ್ಜೇವಾಲ ಸಭೆ ವಿಚಾರ: ರಾಜ್ಯಪಾಲರಿಗೆ ಬಿಜೆಪಿ ನಿಯೋಗದಿಂದ ದೂರು.

ಬೆಂಗಳೂರು,ಜೂನ್,14,2023(www.justkannada.in): ಅಧಿಕಾರಿಗಳ ಜೊತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್  ಸುರ್ಜೇವಾಲ ಸಭೆ  ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ  ರಾಜ್ಯಪಾಲರಿಗೆ ಬಿಜೆಪಿ ನಿಯೋಗ ದೂರು ನೀಡಿದೆ.

ಇಂದು ರಾಜ್ಯಪಾಲರಿಗೆ ಶಾಸಕ ಆರ್.ಅಶೋಕ್ ನೇತೃತ್ವದಲ್ಲಿ ದೂರು ನೀಡಲಾಗಿದೆ. ದೂರು ನೀಡಿದ ಬಳಿಕ ಮಾತನಾಡಿದ ಆರ್. ಅಶೋಕ್ ,  ಬಿಬಿಎಂಪಿ ಕಚೇರಿಯನ್ನ ಕಾಂಗ್ರೆಸ್ ಕಚೇರಿ ಮಾಡಲು ಯತ್ನಿಸಲಾಗುತ್ತಿದೆ ಸುರ್ಜೇವಾಲರಿಗೂ ಬೆಂಗಳೂರಿಗೂ ಎನ್ ಸಂಬಂಧ ಎಂದು ಆರ್.ಅಶೋಕ್ ಪ್ರಶ್ನಿಸಿದರು.

ನಮ್ಮ ಸಂಸದರನ್ನ ಬಿಟ್ಟು ಏನ್ ಚರ್ಚೆ ಮಾಡುತ್ತಾರೆ. ಸಭೆಯಲ್ಲಿ ಸಚಿವರು ಶಾಸಕರಿಗೆ ಬೆಲೆ ಇಲ್ವಾ. ಇದು ನಾಟಕದ ಕಂಪನಿ ಅಲ್ಲ ಸರ್ಕಾರ. ಕರ್ನಾಟಕವನ್ನೆ ಎಟಿಎಂ ಮಾಡಲು ಹೊರಟಿದ್ದಾರೆ ಒಂದು ವರ್ಷದಲ್ಲಿ ರಾಜ್ಯ ದಿವಾಳಿಯಾಗುತ್ತದೆ. ರಾಝ್ಯ ದಿವಾಳಿಯಾಗಲು ಕೇಂದ್ರವೇ ಕಾರಣ ಅಂತಾರೆ  ಎಂದು ಆರ್.ಅಶೋಕ್ ಕಿಡಿಕಾರಿದರು.

Key words: Surjewala -meeting –officials-Complaint – BJP delegation – Governor.