Monday, October 12, 2026

Dasara Wishes

ಯಾದಗಿರಿಗೆ ಕೇಂದ್ರ ಅಧ್ಯಯನ ತಂಡ ಭೇಟಿ: ನೆರೆಹಾನಿ ಪ್ರದೇಶಗಳ ಪರಿಶೀಲನೆ DasraWishes_...
Happy Dasara
Home Front Page ಸರ್ಕಾರಿ ಬಸ್ ನಲ್ಲಿ ಶೋಭಾ ಕರಂದ್ಲಾಜೆ ಅವರಿಗೂ ಫ್ರಿ : ಕಾಂಗ್ರೆಸ್ ಹೇಳಿಕೆ ವಿರುದ್ಧ ಕೇಂದ್ರ...

ಸರ್ಕಾರಿ ಬಸ್ ನಲ್ಲಿ ಶೋಭಾ ಕರಂದ್ಲಾಜೆ ಅವರಿಗೂ ಫ್ರಿ : ಕಾಂಗ್ರೆಸ್ ಹೇಳಿಕೆ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿ.

ಚಿಕ್ಕಮಗಳೂರು,ಜೂನ್,10,2023(www.justkannada.in):  ಸರ್ಕಾರಿ ಬಸ್ ನಲ್ಲಿ ಶೋಭಾ ಕರಂದ್ಲಾಜೆ ಅವರಿಗೂ ಪ್ರಯಾಣ ಮಾಡಲು ಉಚಿತ  ಎಂದ ಕಾಂಗ್ರೆಸ್ ವಿರುದ್ದ ಗರಂ ಆದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ.  ಹೆಣ್ಣು ಮಕ್ಕಳಿಗೆ ಫ್ರಿ ಬಸ್ ಕೊಟ್ಟಿರುವುದು ಖುಷಿಯಾಗಿದೆ.  ಒಳ್ಳೆಯದಾಗಲಿ. ಆದರೆ ಶೋಭಾರಿಗೂ ಫ್ರಿ ಎಂಬ ದುರಹಂಕಾರದ ಮಾತನ್ನ ಕಾಂಗ್ರೆಸ್ ಹೇಳುತ್ತಿದೆ . ಇದಕ್ಕೆ ಜನರೇ ತಕ್ಕ ಉತ್ತರ ಕೊಡುತ್ತಾರೆ ಎಂದು ಕಿಡಿಕಾರಿದರು.

ಚಿಕ್ಕಮಗಳೂರಿನಲ್ಲಿ ಇಂದು ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ,  ಮಕ್ಕಳು ಏನು ಕಲಿಯಬೇಕೆಂದು ನಾವೇ ನಿರ್ಧರಿಸಬೇಕು.  ಮಕ್ಕಳಿಗೆ ಚರಿತ್ರೆ ತಿಳಿಸುವ  ಅಗತ್ಯವಿದೆ  ಪಠ್ಯ, ಒಂದು ಪಕ್ಷ ಒಂದು ಜಾತಿ, ಒಂದು ಧರ್ಮಕ್ಕೆ ಸೀಮಿತವಲ್ಲ. ನಾವು ಸಂವಿಧಾನಾತ್ಮಕವಾಗಿ ಏನನ್ನ ಒಪ್ಪಿಕೊಂಡಿದ್ದೇವೋ ಅದನ್ನೇ ಕಲಿಯುವಂತಹ  ಅವಕಾಶಬೇಕು ಎಂದರು.

ಒಂದು ಸರ್ಕಾರ ಬಂದಾಗ ಒಂದು ಪಠ್ಯ, ಇನ್ನೊಂದು ಸರ್ಕಾರ ಬಂದಾಗ ಮತ್ತೊಂದು ಪಠ್ಯ ಎಂಬುದು ಸರಿಯಲ್ಲ. ನಮ್ಮ ದೇಶಭಕ್ತರ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ನಮ್ಮ ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ಕಲಿಸುವ ಅಗತ್ಯವಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

Key words: government- bus- Union Minister -Shobha Karandlaje-against -Congress