Friday, August 14, 2026

BDA Apartments

Home Front Page ಗೋಹತ್ಯೆ ನಿಷೇಧವಷ್ಟೇ ಅಲ್ಲ ಯಾವ ಪ್ರಾಣಿಯ ಹತ್ಯೆಯನ್ನೂ ನಾನು ಸಹಿಸಲ್ಲ- ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್.

ಗೋಹತ್ಯೆ ನಿಷೇಧವಷ್ಟೇ ಅಲ್ಲ ಯಾವ ಪ್ರಾಣಿಯ ಹತ್ಯೆಯನ್ನೂ ನಾನು ಸಹಿಸಲ್ಲ- ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್.

ಬೆಳಗಾವಿ,ಜೂನ್,6,2023(www.justkannada.in): ಗೋಹತ್ಯೆ ನಿಷೇಧವಷ್ಟೇ ಅಲ್ಲ ಯಾವ ಪ್ರಾಣಿಯ ಹತ್ಯೆಯನ್ನೂ ನಾನು ಸಹಿಸಲ್ಲ ಎಂದು  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್,  ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ‌ಜಿಲ್ಲೆ ವಿಭಜನೆ ಆಗಬೇಕು. ಎಲ್ಲ ನಾಯಕರ ಸಹಮತ ಪಡೆದು ಜಿಲ್ಲೆ ವಿಭಜನೆ ‌ಆಗಲಿ. ಜಿಲ್ಲೆ ವಿಭಜನೆ ‌ಬಗ್ಗೆ ಸರ್ಕಾರ ಮಟ್ಟದಲ್ಲಿ ಚರ್ಚೆ ಆಗಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ನಾಯಕರು ಕ್ರಮಕೈಗೊಳ್ಳುತ್ತಾರೆ ಎಂದರು.

ಬಾಡಿಗೆದಾರರಿಗೆ ಗೃಹಜ್ಯೋತಿ ಯೋಜನೆ ಇಲ್ಲ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಯಾವುದೇ ವದಂತಿಗೆ ದಯಮಾಡಿ ಯಾರೂ ಕಿವಿಗೊಡಬೇಡಿ. ಬೆಲೆ ಏರಿಕೆಯಿಂದ ತತ್ತರಿಸಿದ ನಿಮಗೆ ಆಶಾಕಿರಣ ಮೂಡಿಸಿದ್ದು ಕಾಂಗ್ರೆಸ್. ಕಾಂಗ್ರೆಸ್ ಕೊಟ್ಟ ಭರವಸೆಯನ್ನು ಈಡೇರಿಸುತ್ತದೆ. ​ಮನೆ ಮಾಲೀಕರು, ಬಾಡಿಗೆದಾರರಿಗೆ ಯಾವುದೇ ಆತಂಕ ಬೇಡ. ಇನ್ನು ಅಧಿಕಾರಿಗಳು, ಮಂತ್ರಿಗಳ ಹಂತದಲ್ಲಿ ಎಲ್ಲಾ ಯೋಜನೆಗಳ ಚರ್ಚೆ ನಡೆಯುತ್ತಿದೆ ಎಂದು ಹೇಳಿದರು.

Key words: Cow Slaughter Prohibition Act-Minister- Lakshmi Hebbalkar.