Sunday, August 23, 2026

BDA Apartments

Home Front Page ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ: ಆಭರಣ ಪ್ರಿಯರಿಗೆ ಸಂತಸದ ಸುದ್ದಿ!

ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ: ಆಭರಣ ಪ್ರಿಯರಿಗೆ ಸಂತಸದ ಸುದ್ದಿ!

ಬೆಂಗಳೂರು, ಮೇ 31, 2023 (www.justkannada.in): ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್) ಬೆಲೆ ₹60,600 ರೂಪಾಯಿ ದಾಖಲಾಗಿದೆ.

ಇನ್ನು ಭಾರತದಲ್ಲಿ ಚಿನ್ನದ ಬೆಲೆ ಮೇ 31 ರಂದು ಅನೇಕ ನಗರಗಳಲ್ಲಿ 60,000 ರೂ.ಗಿಂತ ಹೆಚ್ಚಾಗಿದೆ.

ಅದೇ ರೀತಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 55,450 ರೂ. ಇನ್ನು ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 76,800 ರೂ., ಇದೆ.

ಬೆಳ್ಳಿ ಬೆಲೆ 72,600 ರೂ. ಇದೆ. ಸಾಂಸ್ಕೃತಿಕ ಪ್ರಾಮುಖ್ಯತೆ, ಹೂಡಿಕೆ ಮೌಲ್ಯ ಮತ್ತು ಮದುವೆಗಳು ಮತ್ತು ಹಬ್ಬಗಳಲ್ಲಿ ಅದರ ಸಾಂಪ್ರದಾಯಿಕ ಪಾತ್ರದಿಂದಾಗಿ ಚಿನ್ನವನ್ನು ಭಾರತದಲ್ಲಿ ಪ್ರಮುಖ ಭಾಗವೆಂದು ಪರಿಗಣಿಸಲಾಗಿದೆ. ಹೀಗಾಗಿ ಚಿನ್ನದ ದರ ಈ ಸಮಯದಲ್ಲಿ ಕೊಂಚ ಹೆಚ್ಚಾಗುತ್ತದೆ.

ಆದರೆ ಇಂದು ಕೂಡ ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗಿರುವುದು ಕಂಡು ಬಂದಿದೆ.

-V.Mahesh kumar