ಮಹಾರಾಷ್ಟ್ರ ರಾಜಕೀಯದಲ್ಲಿ ತಲ್ಲಣ: ಸಿಎಂ ಏಕನಾಥ್ ಶಿಂಧೆ ವಿರುದ್ಧ ಕೆಲ ಶಾಸಕರು ಗರಂ

ಬೆಂಗಳೂರು, ಮೇ 31, 2023 (www.justkannada.in): ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ 22 ಶಾಸಕರು ಮತ್ತು ಒಂಬತ್ತು ಲೋಕಸಭಾ ಸಂಸದರು ಭಾರತೀಯ ಜನತಾ ಪಕ್ಷದಿಂದ (ಬಿಜೆಪಿ) ಅತೃಪ್ತರಾಗಿದ್ದಾರೆ.

ಹೌದು.  ಮಹಾರಾಷ್ಟ್ರ ಸರ್ಕಾರದಲ್ಲಿ ಅಸಮಾಧಾನದ ಬೆಂಕಿ ಹೊತ್ತಿಕೊಂಡಿದೆ. ಕೆಲ ಶಾಸಕರು ಸಿಎಂ ವಿರುದ್ಧ ಅಸಮಾಧಾನಿತರಾಗಿದ್ದಾರೆ.

ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ-ಶಿವಸೇನೆ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಿಲ್ಲ ಎಂದು ತಿಳಿಸಿರುವ ಅತೃಪ್ತ ಶಾಸಕರು ಬಿಜೆಪಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಅಸಾಮಾಧಾನಗೊಂಡಿರುವ ಶಾಸಕರು ಪಕ್ಷವನ್ನು ತೊರೆಯಲು ಬಯಸಿದ್ದಾರೆ ಎಂದು ಶಿವಸೇನಾ (ಯುಬಿಟಿ) ಪಕ್ಷದ ಮುಖವಾಣಿ ಸಾಮ್ನಾ ಹೇಳಿಕೊಂಡಿದೆ.

ಶಿವಸೇನೆ (ಯುಬಿಟಿ) ಸಂಸದ ವಿನಾಯಕ ರಾವುತ್ ಅವರು ಶಾಸಕರು ತಮ್ಮ ಪಕ್ಷದ ಸಂಪರ್ಕದಲ್ಲಿದ್ದಾರೆ ಮತ್ತು ಅವರ ಕ್ಷೇತ್ರಗಳಲ್ಲಿ ಯಾವುದೇ ಅಭಿವೃದ್ಧಿಯಾಗದ ಕಾರಣ ಶಿಂಧೆ ನೇತೃತ್ವದ ಪಕ್ಷವನ್ನು ತೊರೆಯಲು ಬಯಸಿದ್ದಾರೆ ಎಂದು ತಿಳಿಸಿದ್ದಾರೆ.