Wednesday, September 30, 2026

BDA Apartments

Mysore Dasara Festival BDA JK_Adv BDA Adv
Home Front Page ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಎಲ್ಲಾ ಮಹಿಳೆಯರಿಗೂ ಉಚಿತ ಪ್ರಯಾಣ- ಸಚಿವ ರಾಮಲಿಂಗರೆಡ್ಡಿ ಘೋಷಣೆ.

ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಎಲ್ಲಾ ಮಹಿಳೆಯರಿಗೂ ಉಚಿತ ಪ್ರಯಾಣ- ಸಚಿವ ರಾಮಲಿಂಗರೆಡ್ಡಿ ಘೋಷಣೆ.

ಬೆಂಗಳೂರು,ಮೇ,30,2023(www.justkannada.in): ಸಾರಿಗೆ ಸಂಸ್ಥೆ ಬಸ್ ಗಳಲ್ಲಿ ಎಲ್ಲಾ ಮಹಿಳೆಯರೂ ಉಚಿತ ಪ್ರಯಾಣ ಮಾಡಬಹುದು ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ  ತಿಳಿಸಿದ್ದಾರೆ.

ಮಹಿಳೆಯರಿಗೆ ಉಚಿತ ಬಸ್ ಪಾಸ್ ವಿತರಣೆ ಸಂಬಂಧ ಇಂದು  ಸಾರಿಗೆ  ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು. ಬಳಿಕ  ಮಾತನಾಡಿದ ಅವರು,  ಸರ್ಕಾರಿ ಬಸ್ ​ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಸಾರಿಗೆ ನಿಗಮಗಳ ಎಂಡಿ ಜೊತೆ ಚರ್ಚಿಸಿದ್ದೇವೆ. ಇಂದಿನ ಸಭೆಯಲ್ಲಿ ಸಾಧಕ ಬಾಧಕಗಳ ಬಗ್ಗೆ ಸಮಾಲೋಚನೆ  ಮಾಡಿದ್ದೇವೆ ಸಿಎಂ ಸಿದ್ದರಾಮಯ್ಯಗೆ  ಸಭೆಯ ವರದಿ ಸಲ್ಲಿಸುತ್ತೇವೆ ಎಂದರು.

ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಜೊತೆ ನಿನ್ನೆ  ಸಿಎಂ ಸಿದ್ದರಾಮಯ್ಯನವರು ಸಮಾಲೋಚನೆ ನಡೆಸಿದ್ದಾರೆ. ಸಾರಿಗೆ ನಿಗಮಗಳ ಎಂಡಿಗಳಿಂದ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ವರದಿ ಪಡೆದು ಸಿಎಂಗೆ ಸಲ್ಲಿಸಲಿದ್ದಾರೆ’ ಅಂತಿಮವಾಗಿ ಸಿಎಂ ಸಿದ್ದರಾಮಯ್ಯ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ನಮ್ಮ ಪ್ರಣಾಳಿಕೆಯಲ್ಲಿ ಎಪಿಎಲ್ ಬಿಪಿಎಲ್ ಕಾರ್ಡುದಾರರು ಎಂದು ಹೇಳಿಲ್ಲ ರಾಜ್ಯಾದ್ಯಂತ ಎಲ್ಲಾ ಮಹಿಳೆಯರು ಪ್ರಯಾಣಿಸಬಹುದು ಎಂದು ಸಚಿವ ರಾಮಲಿಂಗರೆಡ್ಡಿ ತಿಳಿಸಿದರು.

Key words: Free- travel – all women – transport-buses – Minister –Ramalingareddy