Wednesday, August 12, 2026

BDA Apartments

Home Front Page ಮೊದಲ ಕಂತಲ್ಲಿ ಸಿಗದ ಮಂತ್ರಿಗಿರಿ: ಆರ್.ವಿ.ದೇಶಪಾಂಡೆ ಗರಂ

ಮೊದಲ ಕಂತಲ್ಲಿ ಸಿಗದ ಮಂತ್ರಿಗಿರಿ: ಆರ್.ವಿ.ದೇಶಪಾಂಡೆ ಗರಂ

ಬೆಂಗಳೂರು, ಮೇ 21, 2023 (www.justkannada.in): ಮೊದಲ ಲಿಸ್ಟ್ ನಲ್ಲಿ ಮಂತ್ರಿಗಿರಿ ಸಿಗದಿರುವುದಕ್ಕೆ ಆರ್.ವಿ.ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೌದು. ಮೊದಲ ಕಂತಿನಲ್ಲಿ ಸಚಿವ ಸ್ಥಾನ ನೀಡದಿರುವುದಕ್ಕೆ ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ. ದೇಶಪಾಂಡೆ ಗರಂ ಆಗಿದ್ದಾರೆ.

ನಾನು 224 ಶಾಸಕರಲ್ಲೇ ಅತ್ಯಂತ ಹಿರಿಯ ಶಾಸಕನಾಗಿದ್ದೇನೆ. ಅತಿ ಹೆಚ್ಚು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನನ್ನನ್ನೇ ಹೊರಗಿಟ್ಟು ಪ್ರಮಾಣವಚನ ಮಾಡ್ತಾ ಇದ್ದಾರೆ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಏರು ಧ್ವನಿಯಲ್ಲಿ ಆಕ್ಷೇಪ ಹೊರ ಹಾಕಿರುವ ದೇಶಪಾಂಡೆ, ಮೊದಲ ಲಿಸ್ಟ್ ನಲ್ಲಿ ಮಂತ್ರಿ ಗಿರಿ ಸಿಗದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.