Wednesday, August 12, 2026

BDA Apartments

Home Front Page ಸಿದ್ಧರಾಮಯ್ಯ ಸಿಎಂ, ಡಿಕೆಶಿ ಡಿಸಿಎಂ: ಹೈಕಮಾಂಡ್ ನಿಂದ ಒಳ್ಳೆಯ ನಿರ್ಧಾರ ಎಂದ ಶಾಸಕ ಲಕ್ಷ್ಮಣ್ ಸವದಿ.

ಸಿದ್ಧರಾಮಯ್ಯ ಸಿಎಂ, ಡಿಕೆಶಿ ಡಿಸಿಎಂ: ಹೈಕಮಾಂಡ್ ನಿಂದ ಒಳ್ಳೆಯ ನಿರ್ಧಾರ ಎಂದ ಶಾಸಕ ಲಕ್ಷ್ಮಣ್ ಸವದಿ.

ಬೆಂಗಳೂರು ಮೇ,18,2023(www.justkannada.in): ಸಿದ್ಧರಾಮಯ್ಯರನ್ನ ರಾಜ್ಯದ ಮುಖ್ಯಮಂತ್ರಿಯಾಗಿ  ಡಿಕೆ ಶಿವಕುಮಾರ್ ರನ್ನ  ಡಿಸಿಎಂ ಆಯ್ಕೆ ಮಾಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ  ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ,  ಕಾಂಗ್ರೆಸ್​​ ಹೈಕಮಾಂಡ್​ ಒಳ್ಳೆಯ ನಿರ್ಧಾರವನ್ನೇ ತೆಗೆದುಕೊಂಡಿದೆ ಎಂದಿದ್ದಾರೆ.

ಈ ಕುರಿತು ಇಂದು  ಮಾಧ್ಯಮಗಳಿಗೆ ಮಾತನಾಡಿದ ಕಾಂಗ್ರೆಸ್​​​ ಶಾಸಕ ಲಕ್ಷ್ಮಣ್ ಸವದಿ ಕಾಂಗ್ರೆಸ್​​ ಹೈಕಮಾಂಡ್​ ಒಳ್ಳೆಯ ನಿರ್ಧಾರವನ್ನೇ ತೆಗೆದುಕೊಂಡಿದೆ. ಲೋಕಸಭಾ ಚುನಾವಣೆ ದೃಷ್ಟಿಯಿಂದ ಈ ನಿರ್ಧಾರ ಮಾಡಿದ್ದಾರೆ ಎಂದರು.

ತಾವು ಸಚಿವ ಸ್ಥಾನದ ಆಕಾಂಕ್ಷಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಲಕ್ಷ್ಮಣ್ ಸವದಿ, ನಾನು ಯಾವುದೇ ಸಚಿವಸ್ಥಾನಕ್ಕಾಗಿ ಬೇಡಿಕೆ ಇಟ್ಟಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಅನುಕೂಲ ಮಾಡಿಕೊಡಿ ಎಂದು ಹೇಳಿದ್ದೇನೆ. ಹೈಕಮಾಂಡ್ ಜವಾಬ್ದಾರಿ ಕೊಟ್ಟರೆ ನಿಭಾಯಿಸುತ್ತೇನೆ. ಯಾವುದೇ ಷರತ್ತು ಹಾಕಿ ನಾನು ಕಾಂಗ್ರೆಸ್ ಸೇರ್ಪಡೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.

Key words: Siddaramaiah -CM, -DK Shivakumar- DCM-MLA Laxman Savadi