Tuesday, September 29, 2026

BDA Apartments

ಸಿದ್ಧರಾಮಯ್ಯಗೆ ಸಿಎಂ ಸ್ಥಾನ ನೀಡುವಂತೆ ಕುರುಬರ ಸಂಘದಿಂದ ಆಗ್ರಹ BDA JK_Adv BDA Adv
Home Front Page ಸಿದ್ಧರಾಮಯ್ಯಗೆ ಸಿಎಂ ಸ್ಥಾನ ನೀಡುವಂತೆ ಕುರುಬರ ಸಂಘದಿಂದ ಆಗ್ರಹ.

ಸಿದ್ಧರಾಮಯ್ಯಗೆ ಸಿಎಂ ಸ್ಥಾನ ನೀಡುವಂತೆ ಕುರುಬರ ಸಂಘದಿಂದ ಆಗ್ರಹ.

ಬೆಂಗಳೂರು,ಮೇ,16,2023(www.justkannada.in):  ಶ್ರಮಕ್ಕೆ ಪ್ರತಿಫಲ ನೀಡಿ.  ಡಿ.ಕೆ ಶಿವಕುಮಾರ್ ಗೆ ಸಿಎಂ ಸ್ಥಾನ ನೀಡಿ ಎಂದು ಅವರ ಬೆಂಬಲಿಗರು ಒತ್ತಾಯಿಸುತ್ತಿದ್ದರೇ ಇತ್ತ ಸಿದ್ಧರಾಮಯ್ಯ ಪರವೂ ಸಹ ಬ್ಯಾಟಿಂಗ್ ಜೋರಾಗಿದೆ.

ಸಿದ್ಧರಾಮಯ್ಯರನ್ನ ಸಿಎಂ ಮಾಡುವಂತೆ ಕಾಂಗ್ರೆಸ್ ಹೈಕಮಾಂಡ್ ಗೆ ರಾಜ್ಯ ಕುರುಬರ ಸಂಘ ಆಗ್ರಹಿಸಿದೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಡಿ. ವೆಂಕಟೇಶ್ ಮೂರ್ತಿ, ಡಿಕೆ ಶಿವಕುಮಾರ್,  ಸಿದ್ಧರಾಮಯ್ಯ ನೇತೃತ್ವದಲ್ಲಿ  ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕುರುಬರು ಕಾಂಗ್ರೆಸ್ ಗೆ ಬೆಂಬಲ ನೀಡಿದ್ದಾರೆ.  5 ವರ್ಷ ತಮ್ಮ ಅಧಿಕಾರವಧಿಯಲ್ಲಿ ಸಿದ್ಧರಾಮಯ್ಯ ಎಲ್ಲಾ ವರ್ಗಕ್ಕೂ ನ್ಯಾಯ ಕೊಟ್ಟಿದ್ದರು. ದಲಿತರು ಹಿಂದುಳಿದ ವರ್ಗ ಎಲ್ಲರಿಗೂ ನ್ಯಾಯ ಕಲ್ಪಿಸಿದ್ದರು.ಸಿದ್ಧರಾಮಯ್ಯಗೆ ಸಿಎಂ ಸ್ಥಾನ ನೀಡುವಂತೆ ಕುರುಬರ ಸಂಘದಿಂದ ಆಗ್ರಹ siddaramaiah siddaramaiah 2

ಹಾಗೆಯೇ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿಯಾಗಬೇಕಿದೆ. ‘ಕಾಂಗ್ರೆಸ್ ಗೆ  90 ಪರ್ಸೆಂಟ್  ಕುರುಬರ ಬೆಂಬಲವಿದೆ.  ಸಿದ್ಧರಾಮಯ್ಯ ಸಿಎಂ ಆಗ್ತಾರೆ ಎಂದು ಮತ ಕೇಳಿದ್ದವು.  ಹೀಗಾಗಿ ಕಾಂಗ್ರೆಸ್ ಗೆ ಹೆಚ್ಚು ಸೀಟ್ ಬಂದಿದೆ. ಅದ್ದರಿಂದ ಸಿದ್ದರಾಮಯ್ಯಗೆ ಸಿಎಂ ಸ್ಥಾನ ನೀಡಬೇಕು ಎಂದು ಡಿ. ವೆಂಕಟೇಶ್ ಮೂರ್ತಿ ಆಗ್ರಹಿಸಿದರು.

Key words: kuruba community- union –demand- Siddaramaiah – CM.