ಡಿಕೆಶಿ ಮತ್ತು ಸಿದ್ಧರಾಮಯ್ಯ ಜೊತೆ ಖರ್ಗೆ ಪ್ರತ್ಯೇಕ ಸಭೆ: ಇಂದೇ ನೂತನ ಸಿಎಂ ಘೋಷಣೆ ಸಾಧ್ಯತೆ..

ನವದೆಹಲಿ,ಮೇ,16,2023(www.justkannada.in): ಸಿಎಂ ಹುದ್ದೆಗಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ನಡುವೆ ಪೈಪೋಟಿ ತೀವ್ರಗೊಂಡಿದ್ದು ಇಬ್ಬರ ಜೊತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಂದು ಪ್ರತ್ಯೇಕ ಸಭೆ ನಡೆಸಲಿದ್ದಾರೆ.

ಸಂಜೆ 5 ಗಂಟೆ ವೇಳೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆ ಸಭೆ ನಡೆಸಿ ಚರ್ಚಿಸಲಿರುವ ಮಲ್ಲಿಕಾರ್ಜುನ ಖರ್ಗೆ ನಂತರ ಸಂಜೆ 6 ಗಂಟೆ ವೇಳೆಗೆ ಸಿದ್ದರಾಮಯ್ಯರ ಜೊತೆ ಸಭೆ ನಡೆಸಿ ಸಮಾಲೋಚನೆ ನಡೆಸಲಿದ್ದಾರೆ.

ಇದಾದ ಬಳಿಕ ಕಾಂಗ್ರೆಸ್ ಹೈಕಮಾಂಡ್ ಸಭೆ ನಡೆಯಲಿದ್ದು, ನಂತರ ರಾತ್ರಿ ವೇಳೆಗೆ ರಾಜ್ಯದ ನೂತನ ಮುಖ್ಯಮಂತ್ರಿ ಯಾರೆಂದು ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನು ನವದೆಹಲಿಯಲ್ಲಿ ಸಹೋದರ ಹಾಗೂ ಸಂಸದ ಡಿ.ಕೆ ಸುರೇಶ್ ನಿವಾಸದಿಂದ ಡಿ.ಕೆ ಶಿವಕುಮಾರ್ ಹೊರಟಿದ್ದಾರೆ.  ಇದಕ್ಕೂ ಮುನ್ನ ಮಾತನಾಡಿರುವ ಅವರು, ಮೊದಲು ಎಐಸಿಸಿ ಅಧ್ಯಕ್ಷರನ್ನ ಭೇಟಿಯಾಗುತ್ತೇನೆ. ಎಲ್ಲಾ ನಾಯಕರನ್ನ ಭೇಟಿಯಾಘುತ್ತೇನೆ ಹೈಕಮಾಂಡ್ ಇದೆ 135 ಶಾಸಕರಿದ್ದಾರೆ ಎಂದಿದ್ದಾರೆ.

Key words: mallikarjuna Kharge- meeting – DK Shivakumar – Siddaramaiah- New CM