ಲಿಂಗಾಯತರನ್ನು ಅವಮಾನಿಸಿದ್ದಕ್ಕೆ ಬಿಜೆಪಿ ಅಧಿಕಾರ ಕಳೆದುಕೊಂಡಿದೆ-ಮಾಜಿ ಸಿಎಂ ಜಗದೀಶ್ ಶೆಟ್ಟರ್.

ಬೆಂಗಳೂರು,ಮೇ,16,2023(www.justkannada.in): ಲಿಂಗಾಯತರನ್ನು ಅವಮಾನಿಸಿದ್ದಕ್ಕೆ ಬಿಜೆಪಿ  ಈಗ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದೆ ಎಂದು  ಮಾಜಿ ಸಿಎಂ ಜಗದೀಶ್ ಶೆಟ್ಟರ್ ಲೇವಡಿ ಮಾಡಿದರು.

ಮಾಜಿ ಸಿಎಂ ಜಗದೀಶ್​ ಶೆಟ್ಟರ್​​ ಅವರ  ನಿವಾಸಕ್ಕೆ ಇಂದು ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ , ಕಾಂಗ್ರೆಸ್​ ನಾಯಕ ದಿನೇಶ್ ಗುಂಡೂರಾವ್ ಭೇಟಿ ನೀಡಿ ಧನ್ಯವಾದ ಅರ್ಪಿಸಿದರು.  ಈ ವೇಳೆ ಮಾತನಾಡಿದ ಜಗದೀಶ್​ ಶೆಟ್ಟರ್, ನನ್ನನ್ನ​ ಸೌಹಾರ್ದಯುತವಾಗಿ ​​ನಾಯಕರು ಭೇಟಿ ಮಾಡಿದ್ದರು. ಕಾಂಗ್ರೆಸ್ ಸೇರಿದ ಮೇಲೆ 15 ಕ್ಷೇತ್ರಗಳಲ್ಲಿ ನಾನು ಪ್ರಚಾರ ಮಾಡಿದ್ದೆ. ಲಿಂಗಾಯತರನ್ನು ಅವಮಾನಿಸಿದ್ದಕ್ಕೆ ಬಿಜೆಪಿ ಅಧಿಕಾರ ಕಳೆದುಕೊಂಡಿದೆ.  ಸಿಎಂ ಸ್ಥಾನದಿಂದ ಬಿಎಸ್​ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದೇಕೆ ಎಂದು ಹೇಳಬೇಕಲ್ವಾ? ಬಿಎಸ್​ ಯಡಿಯೂರಪ್ಪ ಕಣ್ಣೀರು ಹಾಕಿದ್ರು. ನನಗೆ ಟಿಕೆಟ್ ಕೊಡದೆ ಅವಮಾನಿಸಿದ್ದರು. ಇದೆಲ್ಲವೂ ಬಿಜೆಪಿ ಹೀನಾಯವಾಗಿ ಸೋಲಲು ಕಾರಣವಾಗಿದೆ ಎಂದರು.

ಸಿಎಂ ಹುದ್ದೆಗೆ ಪೈಪೋಟಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಜಗದೀಶ್ ಶೆಟ್ಟರ್, ಈ ಬಗ್ಗೆ ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ರಾಜಕೀಯದಲ್ಲಿ ಅಧಿಕಾರಕ್ಕಾಗಿ ಸಹಜವಾಗಿ ಗಲಾಟೆ ನಡೆಯುತ್ತದೆ. ಪೂರ್ಣ ಬಹುಮತ ಬಂದಿದೆ, ಉತ್ತಮ ಆಡಳಿತ ಕೊಡಬೇಕು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇಬ್ಬರೂ ಒಳ್ಳೆಯ  ನಾಯಕರು. ಯಾವುದೇ ಗೊಂದಲವಿಲ್ಲದೆ ನಾಯಕರು ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

Key words: BJP -lost power –insulting- Lingayats-Former CM- Jagdish Shettar.