Wednesday, August 12, 2026

BDA Apartments

Home Front Page ಹೈಕಮಾಂಡ್ ಒಲವಿದೆ: ನೂರಕ್ಕೆ ನೂರರಷ್ಟು ಸಿದ್ಧರಾಮಯ್ಯನವರೇ ಸಿಎಂ- ಶಾಸಕ ಕೆ.ಎನ್ ರಾಜಣ್ಣ ವಿಶ್ವಾಸ.

ಹೈಕಮಾಂಡ್ ಒಲವಿದೆ: ನೂರಕ್ಕೆ ನೂರರಷ್ಟು ಸಿದ್ಧರಾಮಯ್ಯನವರೇ ಸಿಎಂ- ಶಾಸಕ ಕೆ.ಎನ್ ರಾಜಣ್ಣ ವಿಶ್ವಾಸ.

ತುಮಕೂರು,ಮೇ,16,2023(www.justkannada.in):  ಸಿದ್ಧರಾಮಯ್ಯನವರ ಪರ ಹೈಕಮಾಂಡ್ ಗೆ ಒಲುವಿದೆ. ಹೀಗಾಗಿ ನೂರಕ್ಕೆ ನೂರರಷ್ಟು ಸಿದ್ಧರಾಮಯ್ಯನವರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಮಧುಗಿರಿ ಶಾಸಕ ಕೆ.ಎನ್ ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎನ್ ರಾಜಣ್ಣ, ಮೇ 18 ರಂದು ನೂತನ ಸಿಎಂ ಪ್ರಮಾಣ ವಚನ ಸ್ವೀಕರಿಸಬಹುದು. ಹೈಕಮಾಂಢ್ ಒಲವು  ಸಿದ್ಧರಾಮಯ್ಯ ಪರವಾಗಿಯೇ ಇದೆ. ಮೊದಲ ಸಂಪುಟದಲ್ಲೇ ಅನ್ನಭಾಗ್ಯ ಯೋಜನೆ ಜಾರಿ ಮಾಡುತ್ತೇವೆ. ನಾನು ಸಚಿವ ಆಗಲೇಬೇಕು. ಸಹಕಾರ ಸಚಿವ ಸ್ಥಾನ ಬೇಕು ಎಂದು ಇಂಗಿತ ವ್ಯಕ್ತಪಡಿಸಿದರು.

ಸಿಬಿಐ ನಿರ್ದೇಶಕರಾಗಿ ಪ್ರವೀಣ್ ಸೂದ್ ನೇಮಕ ವಿಚಾರ ಕುರಿತು ಪ್ರತಿಕ್ರಿಯಿಸಿದ ಕೆ.ಎನ್ ರಾಜಣ್ಣ, ಡಿಕೆ ಶಿವಕುಮಾರ್ ರನ್ನ ಟಾರ್ಗೆಟ್ ಮಾಡಲಿ ಅಂತಾ ಸಿಬಿಐಗೆ ಪ್ರವೀಣ್ ಸೂದ್ ರನ್ನ ನೇಮಿಸಿದ್ದಾರೆ. ಪ್ರವೀಣ್ ಸೂದ್ ರನ್ನ ಡಿಕೆ ಶಿವಕುಮಾರ್ ಬೈದಿದ್ದರು.  ಈಗ ಪ್ರವೀಣ್ ಸೂದ್ ರನ್ನ ಸಿಬಿಐ ನಿರ್ದೇಶಕರಾಗಿ ನೇಮಿಸಿದ್ದಾರೆ. ಡಿಕೆ ಶಿವಕುಮಾರ್ ಮೇಲೆ ದ್ವೇಷ ಸಾಧಿಸಲು ನೇಮಕ ಮಾಡಿದ್ದಾರೆ.  ಹೆದರಿಸುವುದು ಬ್ಲ್ಯಾಕ್ ಮೇಲ್ ರಾಜಕಾರಣ ಮಾಡುವುದೇ  ಕೆಲಸ ಎಂದು ಕಿಡಿಕಾರಿದರು.

Key words: siddaramaiah-CM-MLA-K.N Rajanna