Monday, September 28, 2026

BDA Apartments

ಡಿಕೆಶಿ ಪರ ಬ್ಯಾಟಿಂಗ್: ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದ ಶಾಸಕ ಹೆಚ್.ಸಿ...
Home Front Page ಡಿಕೆಶಿ ಪರ ಬ್ಯಾಟಿಂಗ್: ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದ ಶಾಸಕ ಹೆಚ್.ಸಿ ಬಾಲಕೃಷ್ಣ.

ಡಿಕೆಶಿ ಪರ ಬ್ಯಾಟಿಂಗ್: ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದ ಶಾಸಕ ಹೆಚ್.ಸಿ ಬಾಲಕೃಷ್ಣ.

ಬೆಂಗಳೂರು,ಮೇ,16,2023(www.justkannada.in): ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ಹಿನ್ನೆಲೆ ಕಾಂಗ್ರೆಸ್ ಹೈಕಮಾಂಡ್ ಗೆ ತಲೆನೋವು ಶುರುವಾಗಿದ್ದು , ಸಿಎಂ ಆಯ್ಕೆ ಕಗ್ಗಂಟಾಗಿದೆ. ಇಂದು ಮಹತ್ವದ ಸಭೆ ನಡೆಯಲಿದ್ದು ನಂತರ ಯಾರು ಸಿಎಂ ಎಂದು ಘೋಷಣೆಯಾಗುವ ಸಾಧ್ಯತೆ ಇದೆ. ಈ ಮಧ್ಯೆ ಡಿ.ಕೆ ಶಿವಕುಮಾರ್ ಪರ ಮಾಗಡಿ ನೂತನ ಶಾಸಕ ಹೆಚ್.ಸಿ ಬಾಲಕೃಷ್ಣ ಬ್ಯಾಟ್ ಬೀಸಿದ್ದಾರೆ.

ಬೆಂಗಳೂರಿನ ಏರ್ ಪೋರ್ಟ್ ನಲ್ಲಿ ಇಂದು ಮಾತನಾಡಿದ ಶಾಸಕ ಬಾಲಕೃಷ್ಣ, ನಮ್ಮ ನಾಯಕರ ಜೊತೆ ದೆಹಲಿಗೆ ತೆರಳುತ್ತಿದ್ದೇನೆ. ಡಿ.ಕೆ ಶಿವಕುಮಾರ್ ರಾಜ್ಯದಲ್ಲಿ ಶ್ರಮಪಟ್ಟು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಶ್ರಮಪಟ್ಟಿದ್ದಕ್ಕೆ ಕೂಲಿಯನ್ನು ಕೇಳ್ತಿದ್ದೇವೆ ಎಂದಿದ್ದಾರೆ.ಡಿಕೆಶಿ ಪರ ಬ್ಯಾಟಿಂಗ್ magadi mla

ನಾನು, ಡಿಕೆಶಿ ಒಂದೇ ಜಿಲ್ಲೆಯವರು, ಹಾಗಾಗಿ ಅವರ ಪರ ಒಲವು. ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳುತ್ತೋ ನೋಡೋಣ. ನಮ್ಮ‌ ಕ್ಷೇತ್ರದ ಜನರಿಗೂ ಸಚಿವರಾಗಲಿ ಎನ್ನುವ ಆಸೆ ಇದೆ. ನನಗೂ ಸಚಿವ ಸ್ಥಾನಬೇಕು ಅನ್ನೋ ಆಸೆಯಿದೆ. ನಾನು 5 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ  ಎಂದು ಬಾಲಕೃಷ್ಣ ಹೇಳಿದರು.

Key words: DK Shivakumar –CM-MLA- HC Balakrishna