Monday, September 28, 2026

BDA Apartments

ಕಾಂಗ್ರೆಸ್ ನನಗೆ ದೇವರು,ತಾಯಿ ಇದ್ದಂತೆ: ಪಕ್ಷ ಇಲ್ಲದಿದ್ದರೇ ನಾವೆಲ್ಲಾ ಶೂನ್...
Home Front Page ಕಾಂಗ್ರೆಸ್ ನನಗೆ ದೇವರು,ತಾಯಿ ಇದ್ದಂತೆ: ಪಕ್ಷ ಇಲ್ಲದಿದ್ದರೇ ನಾವೆಲ್ಲಾ ಶೂನ್ಯ- ಡಿ.ಕೆ ಶಿವಕುಮಾರ್.

ಕಾಂಗ್ರೆಸ್ ನನಗೆ ದೇವರು,ತಾಯಿ ಇದ್ದಂತೆ: ಪಕ್ಷ ಇಲ್ಲದಿದ್ದರೇ ನಾವೆಲ್ಲಾ ಶೂನ್ಯ- ಡಿ.ಕೆ ಶಿವಕುಮಾರ್.

ಬೆಂಗಳೂರು,ಮೇ,16,2023(www.justkannada.in):  ರಾಜ್ಯದಲ್ಲಿ ಕಾಂಗ್ರೆಸ್ ಬಹುಮತ ಪಡೆದಿದ್ದು , ಸಿಎಂ ಸ್ಥಾನಕ್ಕಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಡುವೆ ಪೈಪೋಟಿ ಉಂಟಾಗಿದೆ.

ಈ ಹಿನ್ನೆಲೆಯಲ್ಲಿ ಸಿಎಂ ಆಯ್ಕೆ ಕುರಿತು ಚರ್ಚಿಸಲು ಈಗಾಗಲೇ ನಿನ್ನೆ ಸಿದ್ಧರಾಮಯ್ಯ ದೆಹಲಿಗೆ ತೆರಳಿದ್ದು ಇಂದು ಡಿ.ಕೆ ಶಿವಕುಮಾರ್ ಸಹ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.ಕಾಂಗ್ರೆಸ್ ನನಗೆ ದೇವರು dks

ಇದಕ್ಕೂ ಮುನ್ನ ಮಾತನಾಡಿದ ಡಿ.ಕೆ ಶಿವಕುಮಾರ್,  ಎಐಸಿಸಿ ಪ್ರಧಾನ ಕಾರ್ಯದರ್ಶಿ ದೆಹಲಿಗೆ ಬರಲು ಹೇಳಿದ್ದಾರೆ. ಒಬ್ಬನೇ ದೆಹಲಿಗೆ ಬರುವಂತೆ ನಾಯಕರು ಹೇಳಿದ್ದಾರೆ. ನಾನೊಬ್ಬನೇ ದೆಹಲಿಗೆ ಹೊರಡುತ್ತಿದ್ದೇನೆ. ಕಾಂಗ್ರೆಸ್ ಪಕ್ಷವೇ ನನಗೆ ದೇವರು,ತಾಯಿ ಇದ್ದಂತೆ. ಕಾಂಗ್ರೆಸ್ ಪಕ್ಷ ಇಲ್ಲದಿದ್ದರೇ ನಾವೆಲ್ಲಾ ಶೂನ್ಯ. ಕಾಂಗ್ರೆಸ್​ ಪಕ್ಷವೇ ನಮಗೆ ಶಕ್ತಿ. ರಾಜ್ಯದ ಜನರ ನಂಬಿಕೆ ಉಳಿಸಿಕೊಳ್ಳಲು ಶ್ರಮಪಡಬೇಕಿದೆ. ನನ್ನ ಕೆಲಸವನ್ನು ನಾನು ಮಾಡಿದ್ದೇನೆ ಉಳಿದಿದ್ದು ಹೈಕಮಾಂಡ್ ಗೆ ಬಿಟ್ಟಿದ್ದು ಎಂದರು.

Key words: Congress – God -mother –   DK Shivakumar- Delhi