Monday, September 28, 2026

BDA Apartments

ಬಸ್‌ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ BDA JK_Adv BDA Adv
Home Front Page ಬಸ್‌ ನಲ್ಲೇ  ಮಗುವಿಗೆ ಜನ್ಮ ನೀಡಿದ ಮಹಿಳೆ.

ಬಸ್‌ ನಲ್ಲೇ  ಮಗುವಿಗೆ ಜನ್ಮ ನೀಡಿದ ಮಹಿಳೆ.

ಹಾಸನ,ಮೇ,16,2023(www.justkannada.in): ಮಹಿಳೆಯೊಬ್ಬರು ಬಸ್‌ ನಲ್ಲೇ  ಮಗುವಿಗೆ ಜನ್ಮ ನೀಡಿರುವ ಘಟನೆ ಹಾಸನದಲ್ಲಿ ನಡೆದಿದೆ.

ಚನ್ನರಾಯಪಟ್ಟಣ-ಹಾಸನ ಮಾರ್ಗಮಧ್ಯೆ ಸಾರಿಗೆ ಬಸ್‌ ನಲ್ಲಿ ಈ ಘಟನೆ ನಡೆದಿದೆ. ಬಸ್  ಬೆಂಗಳೂರುನಿಂದ ಚಿಕ್ಕಮಗಳೂರಿಗೆ ಹೋಗುತ್ತಿತ್ತು. ಕೂಲಿ ಕೆಲಸಕ್ಕೆ ಮೂಡುಗೆರೆಗೆ ತೆರಳುತ್ತಿದ್ದ ಬಿಹಾರ ಮೂಲದ ಗರ್ಭಿಣಿ ಮಹಿಳೆಗೆ ಬಸ್‌ ನಲ್ಲೇ ಹೆರಿಗೆ ನೋವು ಕಾಣಿಸಿಕೊಂಡಿದೆ.  ಕೂಡಲೇ ಚಾಲಕ ಬಸ್ ನಿಲ್ಲಿಸಿದ್ದಾರೆ.

ಈ ವೇಳೆ ಬಸ್‌ ನಲ್ಲೇ  ಮಹಿಳೆಗೆ ಹೆರಿಗೆಯಾಗಿದ್ದು ಹೆರಿಗೆಗೆ  ನಿರ್ವಾಹಕಿ ವಸಂತ ಹಾಗೂ ಬಸ್‌ ನಲ್ಲಿದ್ದ ಬೆಂಗಳೂರು ಮೂಲದ ಮಹಿಳೆ ಹಾಗೂ ಪ್ರಯಾಣಿಕರು ಸಹಾಯ ಮಾಡಿದರು. ಪ್ರಯಾಣಿಕ ಸೋಮಶೇಖರ್ ನಂತರ 108 ಅಂಬ್ಯಲೆನ್ಸ್‌ ಗೆ ಕರೆ ಮಾಡಿದ್ದು, ಅಂಬ್ಯುಲೆನ್ಸ್‌ ನಲ್ಲಿ ತಾಯಿ ಮಗುವನ್ನು ಶಾಂತಿಗ್ರಾಮ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.ಬಸ್‌ ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ bus-delevered bus delevered

ಹಾಗೆಯೇ ಮಹಿಳಾ ಕಂಡಕ್ಟರ್ ವಸಂತ ಹಾಗೂ ಪ್ರಯಾಣಿಕರು ಆಸ್ಪತ್ರೆಗೆ ತೆರಳಿ ಹಣದ ಸಹಾಯ ಮಾಡಿದ್ದು, ಈ ಮೂಲಕ ಸಾರಿಗೆ ಬಸ್‌ ನ ಚಾಲಕ, ನಿರ್ವಾಹಕಿ ವಸಂತ ಹಾಗೂ ಪ್ರಯಾಣಿಕರು ಮಾನವೀಯತೆ ಮೆರೆದಿದ್ದಾರೆ.

Key words: Hassan- woman – birth – bus.