Wednesday, August 12, 2026

BDA Apartments

Home Front Page ಮತಯಂತ್ರಗಳನ್ನ ಒಡೆದು ಪುಡಿಪುಡಿ ಮಾಡಿದ ಗ್ರಾಮಸ್ಥರು: ಆತಂಕದ ವಾತಾವರಣ ನಿರ್ಮಾಣ.  

ಮತಯಂತ್ರಗಳನ್ನ ಒಡೆದು ಪುಡಿಪುಡಿ ಮಾಡಿದ ಗ್ರಾಮಸ್ಥರು: ಆತಂಕದ ವಾತಾವರಣ ನಿರ್ಮಾಣ.  

ವಿಜಯಪುರ, ಮೇ,10,2023(www.justkannada.in): ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದಲ್ಲಿ ಗ್ರಾಮಸ್ಥರು ಮತಯಂತ್ರಗಳನ್ನ ಒಡೆದು ಪುಡಿ ಪುಡಿ ಮಾಡಿರುವ ಘಟನೆ ನಡೆದಿದೆ.

ಕಾಯ್ದಿರಿಸಿದ್ದ ವಿಎಂ ವಿವಿ ಪ್ಯಾಟ್ ಮಷೀನ್ ಅನ್ನು ಚುನಾವಣಾಧಿಕಾರಿಗಳು ಕೊಂಡೊಯ್ಯುತ್ತಿದ್ದರು. ಈ ವೇಳೆ ಮತದಾನ ಪ್ರಕ್ರಿಯೆ ಅರ್ಥಕ್ಕೆ ಸ್ಥಗಿತಗೊಳಿಸಿದ್ದಾರೆಂದು ತಪ್ಪಾಗಿ ಭಾವಿಸಿ ಗ್ರಾಮಸ್ಥರು ದಾಳಿ ನಡೆಸಿದ್ದು, ಮತಯಂತ್ರಗಳು ವಿವಿ ಪ್ಯಾಟ್ ಗಳನ್ನ ಪುಡಿಪುಡಿ ಮಾಡಿದ್ದಾರೆ ಎನ್ನಲಾಗಿದೆ.

ಅಲ್ಲದೆ ಚುನಾವಣಾಧಿಕಾರಿಗಳ ಕಾರು ಜಖಂಗೊಳಿಸಿ ಚುನಾವಣಾಧಿಕಾರಿಗಳು  ಸಿಬ್ಬಂದಿಗಳ ಮೇಲೆ ಆಕ್ರೋಶ  ವ್ಯಕ್ತಪಡಿಸಿದ್ದು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

Key words: vijayapur- villagers -smashed – voting machines.