Sunday, August 23, 2026

BDA Apartments

Home Crime ಬೆಂಗಳೂರಿನ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ.

ಬೆಂಗಳೂರಿನ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ.

ಬೆಂಗಳೂರು,ಮೇ,9,2023(www.justkanna.in):  ಬೆಂಗಳೂರಿನ ಖಾಸಗಿ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆಯನ್ನ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬೆಂಗಳೂರು ನಗರ ಜಿಲ್ಲೆಯ ಆನೇಕಲ್​ ತಾಲೂಕಿನ ಹೆಬ್ಬಗೋಡಿಯಲ್ಲಿರುವ  ಎಬಿನೈಜರ್​ ಶಾಲೆಯಲ್ಲಿ ಬಾಂಬ್​ ಇರುವುದಾಗಿ ಇ-ಮೇಲ್​​ ಮೂಲಕ ಸಂದೇಶ  ರವಾನಿಸಿದ್ದಾರೆ. ಬಾಂಬ್ ಇರುವ ಬಗ್ಗೆ ಎಬಿನೈಜರ್​ ಶಾಲೆಯ ಇ-ಮೇಲ್ ವಿಳಾಸಕ್ಕೆ ಸಂದೇಶ ಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಲೆಯನ್ನ ಬಂದ್ ಮಾಡಲಾಗಿದ್ದು,  ಆಡಳಿತ ಮಂಡಳಿ, ಶಾಲಾ ಪ್ರವೇಶ ಪ್ರಕ್ರಿಯೆ ಸ್ಥಗಿತಗೊಳಿಸಿದೆ.

ವಿಚಾರ ತಿಳಿದ ತಕ್ಷಣ  ಹೆಬ್ಬಗೋಡಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿದ್ದು ಶಾಲಾ ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ಪರಿಶೀಲಿಸುತ್ತಿದ್ದಾರೆ. ಕೆಲತಿಂಗಳ‌ ಹಿಂದೆಯೂ ಇದೇ ಶಾಲೆಗೆ ಇದೇ ರೀತಿ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು.

Key words: Bomb- threat – private school -Bengaluru.