ರಾಜ್ಯ ವಿಧಾನಸಭಾ ಚುನಾವಣೆ: 58,282 ಮತಗಟ್ಟೆಗಳಲ್ಲಿ ಬಿಗಿ ಬಂದೋಬಸ್ತ್..

ಬೆಂಗಳೂರು,ಮೇ,9,2023(www.justkannada.in):  ರಾಜ್ಯ  ವಿಧಾನಸಭೆ ಚುನಾವಣೆಯ ಮತದಾನ ನಾಳೆ ನಡೆಯಲಿದ್ದು, ಮತದಾರರು ತನ್ನ ಹಕ್ಕು ಚಲಾಯಿಸಲು ಸಜ್ಜಾಗಿದ್ದಾರೆ. ಈ ನಡುವೆ ರಾಜ್ಯಾದ್ಯಂತ ಪೊಲೀಸ್​ ಬಂದೋಬಸ್ತ್​ ಕೈಗೊಳ್ಳಲಾಗಿದೆ.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 58,282 ಮತಗಟ್ಟೆಗಳನ್ನ ಸ್ಥಾಪಿಸಲಾಗಿದ್ದು, ಭದ್ರತೆಗಾಗಿ 1.56 ಲಕ್ಷ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ರಾಜ್ಯದ 84,119 ಪೊಲೀಸರ ಜೊತೆಗೆ ನೆರೆ ರಾಜ್ಯದ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ. ಹೊರರಾಜ್ಯದಿಂದ 8,500 ಪೊಲೀಸರು, 650 ಸಿಆರ್​ಪಿಎಫ್​ ತುಕಡಿಯನ್ನು ಆಗಮಿಸಿ ಭದ್ರತೆ ನೀಡುತ್ತಿದ್ದಾರೆ. 304 ಡಿವೈಎಸ್​​ಪಿ, 991 ಇನ್ಸ್​​ಪೆಕ್ಟರ್ಸ್​, 2,610 ಪಿಎಸ್​ಐ, 108 ಬಿಎಸ್​ಎಫ್​, 75 ಸಿಐಎಸ್​​ಎಫ್​, 70 ಐಟಿಬಿಪಿ, 35 ಆರ್​ಫಿಎಫ್​ ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.

ವಿಶೇಷವಾಗಿ 2,930 ಪೊಲೀಸ್ ಮೊಬೈಲ್​ ಸೆಕ್ಟರ್ ​ಗಳ ಕಾರ್ಯಾಚರಣೆ, ಮೊಬೈಲ್ ಸೆಕ್ಟರ್​ ಮೇಲ್ವಿಚಾರಣೆಗೆ 749 ಸೂಪರ್ ​ವೈಸರ್​, ರಾಜ್ಯದ ಗಡಿ ಭಾಗದಲ್ಲಿ ವಾಹನಗಳ ತಪಾಸಣೆ ಮಾಡಿ ಬಿಡಲು ಸೂಚನೆ ನೀಡಲಾಗಿದೆ.

Key words: State -assembly –election-Tight -security – 58,282 polling -booths.