Thursday, August 20, 2026

BDA Apartments

Home Front Page ಮುಂದಿನ 4 ದಿನ ಮುಂದುವರಿಯಲಿದೆ ಮಳೆ: ಹವಾಮಾನ ಇಲಾಖೆ

ಮುಂದಿನ 4 ದಿನ ಮುಂದುವರಿಯಲಿದೆ ಮಳೆ: ಹವಾಮಾನ ಇಲಾಖೆ

ಬೆಂಗಳೂರು, ಮೇ 07, 2023 (www.justkannada.in): ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಮುಂದುವರಿಯಲಿದೆ.

ಶನಿವಾರ ಮಲೆನಾಡು ಭಾಗದ ಕೆಲವೆಡೆ ಹಗುರದಿಂದ ಕೂಡಿದ ಸಾಧಾರಣವಾಗಿ ಸುರಿದಿದೆ. ಮೈಸೂರು, ಬೆಂಗಳೂರು, ಮಂಡ್ಯದ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಮಳೆಯಾಗಿದೆ.

ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗದಲ್ಲಿ ಮೇ 9ರಂದು ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉತ್ತರ ಕರ್ನಾಟಕ ಭಾಗದ ಬಹುತೇಕ ಜಿಲ್ಲೆಗಳಲ್ಲಿ ಮೇ 10ರವರೆಗೆ ಗುಡುಗು ಮಿಂಚು ಸಹಿತ ಸಾಧಾರಣ ಮಳೆ ಸುರಿಯಲಿದೆ.

ಜತೆಗೆ ವಿಧಾನಸಭಾ ಚುನಾವಣೆ ನಿಮಿತ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಜ್ಯದಲ್ಲಿ ಕೈಗೊಳ್ಳುವ ರೋಡ್ ಶೋಗೆ ಯಾವುದೇ ತೊಂದರೆಯಾಗದಂತೆ ಐಎಂಡಿ ಮೂರು ಗಂಟೆಗೊಮ್ಮೆ ಹವಾಮಾನದ ಕುರಿತು ಮಾಹಿತಿ ನೀಡುತ್ತಿದೆ.