Sunday, October 4, 2026

BDA Apartments

Home Front Page ಕಾಂಗ್ರೆಸ್ ನಿಂದ ಭ್ರಷ್ಟಾಚಾರ: ಸುಳ್ಳು ಸರ್ವೆಗಳನ್ನ ಮಾಡಿಸಿ ದೇಶದ ಜನರನ್ನ ವಂಚಿಸಿದೆ- ಪ್ರಧಾನಿ ಮೋದಿ ವಾಗ್ದಾಳಿ.

ಕಾಂಗ್ರೆಸ್ ನಿಂದ ಭ್ರಷ್ಟಾಚಾರ: ಸುಳ್ಳು ಸರ್ವೆಗಳನ್ನ ಮಾಡಿಸಿ ದೇಶದ ಜನರನ್ನ ವಂಚಿಸಿದೆ- ಪ್ರಧಾನಿ ಮೋದಿ ವಾಗ್ದಾಳಿ.

ಬಳ್ಳಾರಿ,ಮೇ,5,2023(www.justkannada.in): ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ ಮಾಡಿ ದೇಶದ ಜನರನ್ನು ಮೋಸ ಮಾಡಿದೆ. ಸುಳ್ಳು ಸರ್ವೆಗಳನ್ನು ಮಾಡಿಸಿ ದೇಶದ ಜನರನ್ನು ಕಾಂಗ್ರೆಸ್ ವಂಚಿಸಿದೆ. ಹಣ ಬಲದ ಜೊತೆಗೆ ಸುಳ್ಳು ಸರ್ವೆ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

ಬಳ್ಳಾರಿ ಹೊರವಲಯದ ಸತ್ಯಂ ಕಾಲೇಜು ಆವರಣದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ,  ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಭಯೋತ್ಪಾದನೆ ಬಗ್ಗೆ ಕಾಂಗ್ರೆಸ್  ಮಾತನಾಡಲ್ಲ ಕಾಂಗ್ರೆಸ್ ಹಣಬಲದಿಂದ ಚುನಾವಣೆ ಎದುರಿಸಿದೆ.  ಬಿಜೆಪಿ ಉತ್ತಮ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಕರ್ನಾಟಕ ನಂ1 ಮಾಡುವ ಪ್ರಣಾಳಿಕೆ ಬಿಡುಗಡೆ ಮಾಡಿದೆ ಎಂದರು.ಕಾಂಗ್ರೆಸ್ ನಿಂದ ಭ್ರಷ್ಟಾಚಾರ: ಸುಳ್ಳು ಸರ್ವೆಗಳನ್ನ ಮಾಡಿಸಿ ದೇಶದ ಜನರನ್ನ ವ...

ಸ್ವಾತಂತ್ರ್ಯದ ಬಳಿಕ ದೇಶದ ವ್ಯವಸ್ಥೆಯನ್ನು ಕಾಂಗ್ರೆಸ್​ ಭ್ರಷ್ಟ ಮಾಡಿತ್ತು. ಭ್ರಷ್ಟಾಚಾರವನ್ನು ಮಾಡಿ ದೇಶದ ಜನರನ್ನು ಮೋಸ ಮಾಡಿದೆ. ಸುಳ್ಳು ಸರ್ವೆಗಳನ್ನು ಮಾಡಿಸಿ ದೇಶದ ಜನರನ್ನು ಕಾಂಗ್ರೆಸ್ ವಂಚಿಸಿದೆ. ಕರ್ನಾಟಕವನ್ನು ದೇಶದ ನಂಬರ್ 1 ರಾಜ್ಯ ಮಾಡುತ್ತೇವೆ. ಬಿಜೆಪಿ ಪ್ರಣಾಳಿಕೆಯನ್ನು ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ. ಕಾಂಗ್ರೆಸ್​ ಸುಳ್ಳು ಮೂಟೆಯ ಪ್ರಣಾಳಿಕೆಯನ್ನು ಹೊರಡಿಸಿದೆ. ಪ್ರಣಾಳಿಕೆಯಲ್ಲಿ ಬಜರಂಗಳ ನಿಷೇಧ ಮಾಡುವುದಾಗಿ ಘೋಷಿಸಿದೆ ಎಂದು ಕಿಡಿಕಾರಿದರು.

Key words: Corruption – Congress-  Prime Minister -Modi