ಬಜರಂಗದಳ  ನಿಷೇಧ​​ ವಿಚಾರದಲ್ಲಿ  ಕಾಂಗ್ರೆಸ್​ನಲ್ಲಿಯೇ ಗೊಂದಲ- ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ

ಹುಬ್ಬಳ್ಳಿ,ಮೇ,5,2023(www.justkannada.in):  ಭಜರಂಗದಳ ನಿಷೇಧದ ವಿಚಾರದಲ್ಲಿ ಕಾಂಗ್ರೆಸ್​ನಲ್ಲಿಯೇ ಗೊಂದಲವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದರು.

ಈ ಕುರಿತು ಇಂದು ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವೀರಪ್ಪ ಮೊಹ್ಲಿ ಅವರು ನಾವು ಬಜರಂಗದಳವನ್ನು ಬ್ಯಾನ್ ಮಾಡುವುದಿಲ್ಲ ಎಂದು  ಹೇಳಿದರೇ  ರಣದೀಪ್​ ಸಿಂಗ್​ ಸುರ್ಜೇವಾಲಾ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಾವು  ಭಜರಂಗದಳವನ್ನ ನಿಷೇಧ ಮಾಡಿಯೇ ಮಾಡುತ್ತೇವೆ ಎನ್ನುತ್ತಿದ್ದಾರೆ. ಈ ವಿಚಾರದಲ್ಲಿ ಅವರಲ್ಲಿಯೇ ಸ್ಪಷ್ಟತೆ ಇಲ್ಲ. ಬಜರಂಗದಳ ಭಯ ಎಷ್ಟ ಇದೆ ಎನ್ನುವುದನ್ನು ಕಾಂಗ್ರೆಸ್‌ ನವರು ನೋಡಿಕೊಳ್ಳಿ ಎಂದು ಕಿಡಿಕಾರಿದರು.

ಬಜರಂಗದಳ ನಿಷೇಧ ಮಾಡುವುದರ ಬಗ್ಗೆ ಜಗದೀಶ್ ಶೆಟ್ಟರ್ ತಮ್ಮ ನಿಲುವನ್ನು ವ್ಯಕ್ತಪಡಿಸಬೇಕೆಂದು ನಾನು ವಿನಂತಿ ಮಾಡುತ್ತೇನೆ ಎಂದು ಪ್ರಹ್ಲಾದ್​ ಜೋಶಿ ಆಗ್ರಹಿಸಿದರು.

Key words: Confusion – Congress -r Bajrang Dal -ban – Union Minister -Prahlad Joshi