Thursday, July 30, 2026

BDA Apartments

Home Front Page ಕನಕಪುರದಲ್ಲಿ ಉಸಿರುಗಟ್ಟಿದ ವಾತಾವರಣ ತೊಲಗಬೇಕು: ಅದಕ್ಕಾಗಿ ನಾನು ಅಲ್ಲಿ ಗೆದ್ಧೇ ಗೆಲ್ಲುತ್ತೇನೆ- ಸಚಿವ ಆರ್.ಅಶೋಕ್.

ಕನಕಪುರದಲ್ಲಿ ಉಸಿರುಗಟ್ಟಿದ ವಾತಾವರಣ ತೊಲಗಬೇಕು: ಅದಕ್ಕಾಗಿ ನಾನು ಅಲ್ಲಿ ಗೆದ್ಧೇ ಗೆಲ್ಲುತ್ತೇನೆ- ಸಚಿವ ಆರ್.ಅಶೋಕ್.

ಬೆಂಗಳೂರು,ಮೇ,3,2023(www.justkannada.in):  ಕನಕಪುರದಲ್ಲಿ ಉಸಿರುಗಟ್ಟಿದ ವಾತಾವರಣ ತೊಲಗಬೇಕು. ಅದಕ್ಕಾಗಿ ನಾನು ಅಲ್ಲಿ ಗೆದ್ಧೇ ಗೆಲ್ಲುತ್ತೇನೆ ಎಂದು ಸಚಿವ ಆರ್.ಅಶೋಕ್ ವಿಶ್ವಾಸ ವ್ಯಕ್ತಪಡಿಸಿದರು.

ಇಂದು ಮಾತನಾಡಿದ ಸಚಿವ ಆರ್.ಅಶೋಕ್,  ನೂರಕ್ಕೆ ನೂರು ನಾನು ಗೆಲ್ಲುವ ಸಲುವಾಗಿ ನಾನು ಅಲ್ಲಿಗೆ ಹೋಗಿದ್ದೇನೆ. ಕನಕಪುರದಲ್ಲಿ ಒಳ್ಳೆಯ ಉಸಿರಾಡುವ ಗಾಳಿ ಬರಬೇಕು. ಅಲ್ಲಿ ಉಸಿರುಗಟ್ಟಿದ ವಾತಾವರಣ ತೊಲಗಬೇಕು. ಅದಕ್ಕಾಗಿ ನಾನು ಅಲ್ಲಿ ಗೆದ್ದೇ ಗೆಲ್ಲುತ್ತವೆ ಅದಕ್ಕಾಗಿಯೇ ನಮ್ಮ ನಾಯಕರು ನನನ್ನು ಅಲ್ಲಿಗೆ ಕಳಿಸಿದ್ದಾರೆ. ನಾನು ಕನಕಪುರದಲ್ಲಿ ಗೆದ್ದೆ ಗೆಲ್ಲತ್ತೇನೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಈಗ ಬಿಜೆಪಿ ಹವಾ ಇದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸರ್ಕಾರ ರಚನೆಗೆ ಬೇಕಾಗುವ ಬಹುಮತ ನಮಗೆ ಸಿಗಲಿದೆ. ಅದಕ್ಕಿಂತ ಹೆಚ್ಚಿನ ಸ್ಥಾನಗಳನ್ನು ನಾವು ಗೆಲ್ಲಲಿದ್ದೇವೆ. ಈಗಾಗಲೇ ಹಲವಾರು ಸಮೀಕ್ಷೆಗಳು ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ವರದಿ ನೀಡಿವೆ.  ಅದೇ ರೀತಿಯ ಜನ ಬೆಂಬಲ ಸಹ ಕಾಣುತ್ತಿದೆ. ಕಾಂಗ್ರೆಸ್ ಈ ದೇಶದಲ್ಲಿ ಧೂಳಿಪಟ ಆಗಿದೆ ಎಂದು  ಆರ್.ಅಶೋಕ್ ನುಡಿದರು.

Key words: suffocating -atmosphere – Kanakapur –win-  Minister -R. Ashok.