ಮೈಸೂರು ಜಿಲ್ಲೆ ಕರ್ನಾಟಕ ಪಶುವೈದ್ಯಕೀಯ ಸಂಘದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡಾ ವೈ ಡಿ ರಾಜಣ್ಣರಿಗೆ ಅಭಿನಂದನೆ.

ಮೈಸೂರು,ಮೇ,3,2023(www.justkannada.in): ಕಳೆದ 30ವರ್ಷಗಳಿಂದ ಪಶುವೈದ್ಯಾಧಿಕಾರಿಯಾಗಿ ಇದೀಗ ಸರಗೂರು ತಾಲ್ಲೂಕಿನ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ ವೈ ಡಿ ರಾಜಣ್ಣ ಅವರು 2023-25ನೇ ಸಾಲಿಗೆ ಕರ್ನಾಟಕ ಪಶುವೈದ್ಯಕೀಯ ಸಂಘದ ಚುನಾವಣೆಯಲ್ಲಿ ಅವಿರೋಧವಾಗಿ ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷರಾಗಿ  ಆಯ್ಕೆಯಾಗಿದ್ದಾರೆ.  ಈ ಹಿನ್ನಲೆ ಇಂದು ನಗರದ ಡಿ.ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾನ ಸಮಿತಿಯ ಅಧ್ಯಕ್ಷ ಜಾಕೀರ್ ಹುಸೇನ್  ನೇತೃತ್ವದಲ್ಲಿ ಸಮಿತಿಯು ರಾಜಣ್ಣ  ಅವರ ನಿವಾಸಕ್ಕೆ ತೆರಳಿ  ಅವರನ್ನು ಅಭಿನಂದಿಸಲಾಯಿತು.

ವೈ. ಡಿ. ರಾಜಣ್ಣ ಅವರು  ಪಶುವೈದ್ಯಕೀಯ ವೃತ್ತಿಯ ಜತೆ ಜತೆಗೆ ಪ್ರವೃತ್ತಿಯಲ್ಲಿ ಸಾಹಿತಿ ಕವಿಗಳಾಗಿ ಸಂಘಟಕರಾಗಿಯೂ ಕಾರ್ಯನಿರ್ವಹಿಸಿರುವ ಹಿರಿಮೆ ಇವರದಾಗಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ 20 ವರ್ಷಕ್ಕೂ ಹೆಚ್ಚು  ಕಾಲ ಸೇವೆ ಸಲ್ಲಿಸಿ ಹೈನುಗಾರಿಕೆಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.

ಗ್ರಾಮೀಣ ಹಾಲು ಉತ್ಪಾದನೆಗೆ ಮಹತ್ವದ ಪಾತ್ರವಹಿಸಿರುವ ಮಹಿಳಾ ಸ್ವ ಸಹಾಯ ಸಂಘಟನೆಗಳಿಗೆ, ಹಾಲು ಉತ್ಪಾದನೆಗೆ ಸಂಘಗಳಿಗೆ ತರಬೇತಿ..ಹೈನು ರಾಸುಗಳ ಚಿಕಿತ್ಸೆ .ಪಶು ಆರೋಗ್ಯ ಶಿಬಿರಗಳು..ಹೈನುಗಾರಿಕೆ ಕುರಿತಾಗಿ ನಾಡಿನ ದಿನಪತ್ರಿಕೆಗಳಲ್ಲಿ ವಿವಿಧ ಲೇಖನ.ಆಕಾಶವಾಣಿ ದೂರದರ್ಶನ ಗಳಲ್ಲಿ ಪಶುಪಾಲನೆ ಕುರಿತ ಸಂದರ್ಶನಗಳು  ಪ್ರಸಾರವಾಗಿವೆ. ಈ ಎಲ್ಲ ಕಾರ್ಯಗಳ ನೆಲೆ ಹಿನ್ನೆಲೆಯಲ್ಲಿ 2007ರಲ್ಲಿ ಇಲಾಖೆಯಿಂದ ಶ್ರೇಷ್ಟ ಪಶುವೈದ್ಯ ಪ್ರಶಸ್ತಿ ಗೆ ಭಾಜನರಾಗಿದ್ದಾರೆ. ಹಾಗೆಯೇ ಮೈಸೂರು ಜಿಲ್ಲಾ ಆಡಳಿತದಿಂದ ಪಶುವೈದ್ಯಕೀಯ ಸೇವೆಗಳಿಗಾಗಿ 2009 ರಲ್ಲಿ “ಅತ್ಯುತ್ತಮ ನಾಗರೀಕ ಸೇವೆಗಳ ಪುರಸ್ಕಾರ” ಜಿಲ್ಲಾ ರಾಜ್ಯೋತ್ಸವ  ಗೌರವಕ್ಕೆ ಭಾಜನರಾಗಿದ್ದಾರೆ.

ಇನ್ನು ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಎಂ. ಚಂದ್ರಶೇಖರ್.ಮೈಸೂರು ತಾ ಕಸಾಪ ಅಧ್ಯಕ್ಷ ಮಂಜುನಾಥ್, ಸಮಿತಿಯ ಪ್ರಧಾನ ಸಂಚಾಲಕರು ಆದ  ಪವನ್ ಸಿದ್ದರಾಮ, ರಧಿವುಲ್ಲಾ ಖಾನ್ ಹಾಗೂ ಇತರರು ಉಪಸ್ಥಿತರಿದ್ದರು.