Tuesday, August 11, 2026

BDA Apartments

Home Front Page ನಮ್ಮ ಪ್ರಣಾಳಿಕೆಯಲ್ಲಿ ಬದಲಾವಣೆ ಇಲ್ಲ: ಆಂಜನೇಯನಿಗೂ ಭಜರಂಗದಳಕ್ಕೂ ಏನ್ ಸಂಬಂಧ- ಬಿಜೆಪಿಗೆ ಡಿ.ಕೆ ಶಿವಕುಮಾರ್ ಚಾಟಿ.

ನಮ್ಮ ಪ್ರಣಾಳಿಕೆಯಲ್ಲಿ ಬದಲಾವಣೆ ಇಲ್ಲ: ಆಂಜನೇಯನಿಗೂ ಭಜರಂಗದಳಕ್ಕೂ ಏನ್ ಸಂಬಂಧ- ಬಿಜೆಪಿಗೆ ಡಿ.ಕೆ ಶಿವಕುಮಾರ್ ಚಾಟಿ.

ಬೆಂಗಳೂರು,ಮೇ,3,2023(www.justkannada.in): ಬಜರಂಗದಳ ನಿಷೇಧ ಬಗ್ಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿರುವ ವಿಚಾರ ಕುರಿತು ಟೀಕಿಸಿದ ಬಿಜೆಪಿ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಚಾಟಿ ಬೀಸಿದ್ದಾರೆ.

ಈ ಕುರಿತು ಮಾತನಾಡಿರುವ ಡಿ.ಕೆ ಶಿವಕುಮಾರ್, ಅವರು ಮಾತ್ರ ಅಂಜನೇಯ ಭಕ್ತರಾ? ನಾವು ಕೂಡ ಆಂಜನೇಯ ಭಕ್ತರು.  ಶಾಂತಿ ತೋಟ ಕದಲಬಾರದು. ಸೌಹಾರ್ದತೆ‌ ಇರಬೇಕು. ಭಜರಂಗದಳ ಬ್ಯಾನ್ ಮಾಡ್ತೀವಿ ಅಂದ್ರೆ ಯಾಕೆ ಅವರು ಗಾಬರಿ ಆಗ್ತಿದ್ದಾರೆ. ಆಂಜನೇಯನಿಗೂ ಭಜರಂಗದಳಕ್ಕೂ ಏನ್ ಸಂಬಂಧ. ಬಿಜೆಪಿ ಅವರು ಬಹಳ ಪ್ರವೋಕ್  ಮಾಡುತ್ತಿದ್ದಾರೆ. ಜನಕ್ಕೆ ಇದು ಅರ್ಥ ಅಗಿದ್ದು, ನಮ್ಮ ಪ್ರಣಾಳಿಕೆಯಲ್ಲಿ ಬದಲಾವಣೆ ಇಲ್ಲ ಎಂದು ತಿಳಿಸಿದರು.

‘ನಾವು ಹನುಮಂತ ಭಕ್ತರು, ಆಂಜನೇಯ ಬೇರೆ ಭಜರಂಗದಳ ಬೇರೆ, ಬಿಜೆಪಿ ಅವರು ಭಜರಂಗಿ ಎಂದು ಕ್ಯಾಂಪೇನ್ ಮಾಡೋದು ಬೇಡ. ಹೊಟ್ಟೆಗೆ ಏನ್ ಕೊಟ್ಟಿದ್ದೀರಿ, ಉದ್ಯೋಗ ಏನ್ ಕೊಟ್ರಿ ಹೇಳಿ  ಎಂದು ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

Key words: No change – our manifesto-DK Shivakumar – BJP