Friday, September 18, 2026

BDA Apartments

ಬಿಜೆಪಿ ಪರ ಪ್ರಚಾರ ಸ್ಥಗಿತ?: ಬೆಂಗಳೂರಿಗೆ ವಾಪಸ್ ಆಗಿದ್ದೇಕೆ ನಟ ಸುದೀಪ್? BDA JK_Ad...
Home Cinema ಬಿಜೆಪಿ ಪರ ಪ್ರಚಾರ ಸ್ಥಗಿತ?: ಬೆಂಗಳೂರಿಗೆ ವಾಪಸ್ ಆಗಿದ್ದೇಕೆ ನಟ ಸುದೀಪ್?

ಬಿಜೆಪಿ ಪರ ಪ್ರಚಾರ ಸ್ಥಗಿತ?: ಬೆಂಗಳೂರಿಗೆ ವಾಪಸ್ ಆಗಿದ್ದೇಕೆ ನಟ ಸುದೀಪ್?

ಬೆಂಗಳೂರು, ಏಪ್ರಿಲ್ 30, 2023 (www.justkannada.in): ನಟ ಸುದೀಪ್‌ ಅವರು ಕಾಂಗ್ರೆಸ್ ಪರ ಕೂಡ ಪ್ರಚಾರ ನಡೆಸುವ ಸಾಧ್ಯತೆ ಇದೆ.

ಇದ್ದಕ್ಕಿದ್ದಂತೆ ಕಿಚ್ಚ ಕಮಲಪಾಳಯದ ಪರ ಪ್ರಚಾರ ಮಾಡುವುದನ್ನು ಸ್ಥಗಿತಗೊಳಿಸಿದ್ದಾರೆ ಎನ್ನಲಾಗಿದೆ.

ನಾನು ಬೊಮ್ಮಾಯಿ ಮಾಮನ ಪರವಾಗಿ ಮಾತ್ರ ಪ್ರಚಾರ ಮಾಡುತ್ತೇನೆ ಎಂದು ಘೋಷಣೆ ಮಾಡಿದಂತೆ ಸುದೀಪ್ ಬಿಜೆಪಿ ಪಕ್ಷದ ಪರ ಪ್ರಚಾರಕ್ಕೆ ಸೀಮಿತವಾಗಿದ್ದರು.

ಕಾಂಗ್ರೆಸ್‌ನಿಂದ ಪ್ರಚಾರಕ್ಕೂ ಸಹ ಆಹ್ವಾನ ಬಂದಿತ್ತು. ಅಲ್ಲದೆ, ಕೈ ಪಾಳಯದಲ್ಲಿಯೂ ಅವರ ಸ್ನೇಹಿತ ಅಭ್ಯರ್ಥಿಗಳಿದ್ದಾರೆ. ನಿನ್ನೆ ರೋಡ್ ಶೋ ವೇಳೆ ಸರಿಯಾದ ವ್ಯವಸ್ಥೆ ಮಾಡದ ಕಾರಣ ಪ್ರಚಾರ ಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ ಎನ್ನಲಾಗಿದೆ.