ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ: ರೋಡ್ ಶೋಗೆ ಕ್ಷಣಗಣನೆ.

ಬೆಂಗಳೂರು,ಏಪ್ರಿಲ್,29,2023(www.justkannada.in):  ರಾಜ್ಯ ವಿಧಾನಸಭಾ ಚುನಾವಣೆಗೆ ಹಿನ್ನೆಲೆ ಇಂದು ರಾಜ್ಯಕ್ಕೆ ಆಗಮಿಸಿ ವಿಜಯಪುರ, ಬೆಳಗಾವಿಯಲ್ಲಿ ಸಮಾವೇಶದಲ್ಲಿ ಪಾಲ್ಕೊಂಡು ಬಿಜೆಪಿ ಪರ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಇದೀಗ ರಾಜ್ಯರಾಜಧಾನಿ ಬೆಂಗಳೂರಿಗೆ ಆಗಮಿಸಿದ್ದಾರೆ.

ಪ್ರಧಾನಿ ಮೋದಿ ಬೆಂಗಳೂರಲ್ಲಿ ರೋಡ್ ಶೋ ನಡೆಸಲಿದ್ದಾರೆ. ಮಾಗಡಿ ರೋಡ್ ನೈಸ್ ರೋಡ್​ನಿಂದ ರೋಡ್ ಶೋ ಆರಂಭವಾಗಲಿದ್ದು, ಸುಮನಹಳ್ಳಿ ಜಂಕ್ಷನ್​ನಲ್ಲಿ ಅಂತ್ಯವಾಗಲಿದೆ. ಸುಮಾರು 5.5 ಕಿ.ಮೀ ದೂರು ರೋಡ್ ಶೋ ನಡೆಯಲಿದೆ.  ಈ ಹಿನ್ನೆಲೆ ಸುಮನಹಳ್ಳಿ ಜಂಕ್ಷನ್ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸುಮ್ನಳ್ಳಿ ಜಂಕ್ಷನ್​ನಲ್ಲಿ  ಎಲ್ಲಾ ರೋಡ್ಗಳು ಕ್ಲೋಸ್​ ಮಾಡಿದ್ದು, ಬ್ಯಾರಿಕೆಡ್​ ಹಾಕಿ ಪೊಲೀಸರು ನಿಯೋಜನೆ ಮಾಡಿದ್ದಾರೆ.

ಪ್ರಧಾನಿ ಮೋದಿ ರೋಡ್ ಶೋ ಹಿನ್ನೆಲೆ ಈಸ್ಟ್ ವೆಸ್ಟ್ ಜಂಕ್ಷನ್ ಬಳಿಗೆ ಕಾರ್ಯಕರ್ತರು ಆಗಮಿಸಿದ್ದಾರೆ. ಪ್ರಧಾನಿ ಮೋದಿ ಅವರನ್ನ ನೋಡಲು ಸಾರ್ವಜನಿಕರು ಮತ್ತು ಬಿಜೆಪಿ ಕಾರ್ಯಕರ್ತರು ಆಗಮಿಸಿದ್ದಾರೆ.

V.Mahesh kumar

Key words: Prime Minister- Narendra Modi – Bangalore-road show.