Sunday, September 20, 2026

BDA Apartments

Home Front Page ಲಿಂಗಾಯತ ಡ್ಯಾಂ ಬಗ್ಗೆ ಮಾತನಾಡಿದ್ದೀರಿ: ನಿಮ್ಮ ಕಾಂಗ್ರೆಸ್ಸಿನ ಗುಂಡಿಯಲ್ಲಿ ನೀರಿಲ್ಲ. ಅದರ ಬಗ್ಗೆ ಚಿಂತನೆ ಮಾಡಿ-...

ಲಿಂಗಾಯತ ಡ್ಯಾಂ ಬಗ್ಗೆ ಮಾತನಾಡಿದ್ದೀರಿ: ನಿಮ್ಮ ಕಾಂಗ್ರೆಸ್ಸಿನ ಗುಂಡಿಯಲ್ಲಿ ನೀರಿಲ್ಲ. ಅದರ ಬಗ್ಗೆ ಚಿಂತನೆ ಮಾಡಿ- ಸಿಎಂ ಬೊಮ್ಮಾಯಿ ಟಾಂಗ್.

ಬೆಂಗಳೂರು,ಏಪ್ರಿಲ್,21,2023(www.juskannada.in):   ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್​ ವಾರ್​ ನಡೆಸಿದ್ದಾರೆ.

ಡಿ.ಕೆ.ಶಿವಕುಮಾರ್​ ಅವರೇ ಲಿಂಗಾಯತ ಡ್ಯಾಂ ಬಗ್ಗೆ ಮಾತನಾಡಿದ್ದೀರಿ. ಲಿಂಗಾಯತ ಡ್ಯಾಂ ಎಷ್ಟು ಗಟ್ಟಿ ಇದೆ ಎಂಬ ಅರಿವು ನಿಮಗಿಲ್ಲ. ನೀವು ಅದನ್ನು ಒಡೆಯುವ ಭ್ರಮೆಯಲ್ಲಿದ್ದೀರಿ. 2018ರಲ್ಲಿ ನಿಮ್ಮ ಸರ್ಕಾರವಿದ್ದಾಗ ಇದನ್ನು ಒಡೆಯಲು ಸಾಧ್ಯವಾಗಿಲ್ಲ. ಈಗೇನು ಮಾಡಲು ಸಾಧ್ಯ ಎಂದು ಡಿಕೆ ಶಿವಕುಮಾರ್ ಗೆ  ಸಿಎಂ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದ್ದಾರೆ.

ಮೊದಲು ನಿಮ್ಮ ಕಾಂಗ್ರೆಸ್ಸಿನ ಗುಂಡಿಯಲ್ಲಿ ನೀರಿಲ್ಲ. ಅದರ ಬಗ್ಗೆ ಚಿಂತನೆ ಮಾಡಿ, ನಿಮ್ಮ ಹೇಳಿಕೆಯನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ಮೇ 13 ಕ್ಕೆ ಯಾರ್ ಯಾರ ಡ್ಯಾಮ್ ನಲ್ಲಿ ಎಷ್ಟು ನೀರಿದೆ ಅಂತ ಗೊತ್ತಾಗುತ್ತದೆ. ನಿಮ್ಮ ಹೇಳಿಕೆಯಿಂದ ಲಿಂಗಾಯತ ಧರ್ಮವನ್ನು ಒಡೆಯುವ ಮತ್ತೊಂದು ಹುನ್ನಾರ ಬಯಲಾಗಿದೆ ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.ಲಿಂಗಾಯತ ಡ್ಯಾಂ ಬಗ್ಗೆ ಮಾತನಾಡಿದ್ದೀರಿ cm bommai cm bommai 4

ಡ್ಯಾಂ ಒಡೆದಾಗ ಹರಿವ ನೀರು ನಿಲ್ಲಿಸಲಾಗದು ಡ್ಯಾಂ ಒಡೆದಾಗ ಹೊಸದಾಗಿ ಡ್ಯಾಂ ಕಟ್ಟಬೇಕು. ಹರಿಯುವ ನೀರು ಸಮುದ್ರ ಸೇರಲೇಬೇಕು ಎಂದು ಕೆಲ ಲಿಂಗಾಯತ ನಾಯಕರು ಕಾಂಗ್ರೆಸ್ ಸೇರ್ಪಡೆ ಕುರಿತು ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದರು.

Key words: CM-Basavaraja bommai-DK Shivakumar-lingayat dam