Sunday, September 20, 2026

BDA Apartments

ಕಾಂಗ್ರೆಸ್ ನವರು ಲಿಂಗಾಯತ ಸಿಎಂ ಅಂತಾ ಘೋಷಣೆ ಮಾಡಲಿ ನೋಡೋಣ- ಸಚಿವ ವಿ.ಸೋಮಣ್ಣ ...
Home Front Page ಕಾಂಗ್ರೆಸ್ ನವರು ಲಿಂಗಾಯತ ಸಿಎಂ ಅಂತಾ ಘೋಷಣೆ ಮಾಡಲಿ ನೋಡೋಣ- ಸಚಿವ  ವಿ.ಸೋಮಣ್ಣ ಸವಾಲು.

ಕಾಂಗ್ರೆಸ್ ನವರು ಲಿಂಗಾಯತ ಸಿಎಂ ಅಂತಾ ಘೋಷಣೆ ಮಾಡಲಿ ನೋಡೋಣ- ಸಚಿವ  ವಿ.ಸೋಮಣ್ಣ ಸವಾಲು.

ಚಾಮರಾಜನಗರ,ಏಪ್ರಿಲ್,20,2023(www.justkannada.in):  ಬಿಜೆಪಿಯು ಲಿಂಗಾಯತರನ್ನ ಕಡೆಗಣಿಸಿದೆ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕರಿಗೆ ಸಚಿವ ವಿ.ಸೋಮಣ್ಣ ತಿರುಗೇಟು ನೀಡಿದ್ದಾರೆ.

ಚಾಮರಾಜನಗರದಲ್ಲಿ ಇಂದು ಮಾತನಾಡಿದ ಸಚಿವ ವಿ.ಸೋಮಣ್ಣ, ಬಿಜೆಪಿ ಲಿಂಗಾಯತ ವಿರೋಧಿಗಳು ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ, ವೀರೇಂದ್ರ ಪಾಟೀಲರನ್ನು ತೆಗೆದಿದ್ದು ಯಾರು.? ನಿಜಲಿಂಗಪ್ಪ ಅವರನ್ನು ದೇಶಬಿಟ್ಟು ಕಳುಹಿಸಿದ್ದು ಯಾರು..? ಈ ಕಾಂಗ್ರೆಸ್ ಗೆ ಲಿಂಗಾಯತರನ್ನು ಇಲ್ಲದಾಗ ಏನಾಯ್ತು..! ಜಗದೀಶ್ ಶೆಟ್ಟರ್, ಸವದಿ ಅಂಥಾ ಹೇಳ್ತಾ ಇದಾರೆ, ಲಿಂಗಾಯತ ಸಿಎಂ ಮಾಡಲಿ. ಜಗದೀಶ್ ಶೆಟ್ಟರ್ ರನ್ನ ಸಿಎಂ ಮಾಡಲಿ ನೋಡೋಣಾ ಎಂದು ಸವಾಲು ಹಾಕಿದರು.ಕಾಂಗ್ರೆಸ್ ನವರು ಲಿಂಗಾಯತ ಸಿಎಂ ಅಂತಾ ಘೋಷಣೆ ಮಾಡಲಿ ನೋಡೋಣ somanna

ಇವೆಲ್ಲಾ ಕಾಂಗ್ರೆಸ್ ನವರ ಕಣ್ಣೊರೆಸುವ ತಂತ್ರ. ಲಿಂಗಾಯತರನ್ನ ಬ್ಲಾಕ್ ಮೇಲ್ ಮಾಡೋಕೆ ಆಗಲ್ಲ. ಲಿಂಗಾಯತರು ದಡ್ಡರಲ್ಲ, ಸ್ವಾಭಿಮಾನಿಗಳು.  ಬಿಎಲ್ ಸಂತೋಷ್ ಅವರು ಒಬ್ಬ  ಸಕ್ರಿಯ ಕಾರ್ಯಕರ್ತ  ಎಂದು ಸಚಿವ ಸೋಮಣ್ಣ ಹೇಳಿದರು.

Key words: Congress- Jagdish Shettar – CM-Minister -V. Somanna