Monday, November 9, 2026

Dasara Wishes

Happy Dasara
Home Front Page ಲಕ್ಷ್ಮಣ್ ಸವದಿಗೆ ಕಾಂಗ್ರೆಸ್ ಸೇರ್ಪಡೆಗೆ ಆಹ್ವಾನ ನೀಡಿದ ಬಿ.ಕೆ ಹರಿಪ್ರಸಾದ್.

ಲಕ್ಷ್ಮಣ್ ಸವದಿಗೆ ಕಾಂಗ್ರೆಸ್ ಸೇರ್ಪಡೆಗೆ ಆಹ್ವಾನ ನೀಡಿದ ಬಿ.ಕೆ ಹರಿಪ್ರಸಾದ್.

ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಭಾಗಿಯಾಗಿದ್ರೆ ಕ್ರಮ- ಬಿಕೆ ಹರಿಪ್ರಸಾದ್

ಬೆಂಗಳೂರು,ಏಪ್ರಿಲ್,13,2023(www.justkannada.in): ಅಥಣಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಪಕ್ಷದ ಹೈಕಮಾಂಡ್ ವಿರುದ್ಧ ಸಿಡಿದೆದ್ದಿರುವ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ನಾಳೆ ಬಿಜೆಪಿಗೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಈ ಬೆನ್ನಲ್ಲೆ ಲಕ್ಷ್ಮಣ್ ಸವದಿಗೆ ಕಾಂಗ್ರೆಸ್ ಸೇರ್ಪಡೆಯಾಗಲು  ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್  ಆಹ್ವಾನ ನೀಡಿದ್ದಾರೆ.ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಭಾಗಿಯಾಗಿದ್ರೆ ಕ್ರಮ- ಬಿಕೆ ಹರಿಪ್ರಸಾದ್

ಈ ಕುರಿತು ಮಾತನಾಡಿದ ಬಿ.ಕೆ ಹರಿಪ್ರಸಾದ್, ಲಕ್ಷ್ಮಣ್ ಸವದಿ ಹಿರಿಯ ಮುಖಂಡ.  ಡಿಸಿಎಂ ಹುದ್ದೆ ನಿಭಾಯಿಸಿದವರು. ಕಾಂಗ್ರಸ್  ಸಿದ್ದಾಂತ ಒಪ್ಪಿ ಕಾಂಗ್ರೆಸ್ ಬರುವುದಾದರೇ ಬರಬಹುದು.  ಕಾಂಗ್ರೆಸ್ ಗೆ ಸೇರ್ಪಡೆಯಾಗಬಹುದು ಎಂದು ಹೇಳಿದ್ದಾರೆ.

Key words: BK Hariprasad –invited- Laxman Savadi – join – Congress.