Sunday, September 20, 2026

BDA Apartments

ಎದುರಾಳಿ ಯಾರು ಅನ್ನೋದು ನನಗೂ ಮುಖ್ಯ: ನನ್ನ ಮೇಲೆ ಜನ ವಿಶ್ವಾಸವಿಟ್ಟಿದ್ದಾರೆ...
Home Front Page ಎದುರಾಳಿ ಯಾರು ಅನ್ನೋದು ನನಗೂ ಮುಖ್ಯ: ನನ್ನ ಮೇಲೆ ಜನ ವಿಶ್ವಾಸವಿಟ್ಟಿದ್ದಾರೆ-ಸಿಎಂ ಬಸವರಾಜ ಬೊಮ್ಮಾಯಿ.

ಎದುರಾಳಿ ಯಾರು ಅನ್ನೋದು ನನಗೂ ಮುಖ್ಯ: ನನ್ನ ಮೇಲೆ ಜನ ವಿಶ್ವಾಸವಿಟ್ಟಿದ್ದಾರೆ-ಸಿಎಂ ಬಸವರಾಜ ಬೊಮ್ಮಾಯಿ.

ದಕ್ಷಿಣ ಕನ್ನಡ,ಏಪ್ರಿಲ್,12,2023(www.justkannada.in):  ರಾಜ್ಯ ವಿಧಾನಸಭಾ ಚುನಾವಣೆಗೆ 189 ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೆ ಟಿಕೆಟ್ ವಂಚಿತ ಹಲವು ಮುಖಂಡರು ಅಸಮಾಧಾನ ವ್ಯಕ್ತಪಡಿಸಿರುವ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ಇಂದು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ ಕುಕ್ಕೆ ಸುಬ್ರಹ್ಮಣ್ಯಸ್ವಾಮಿ ದರ್ಶನ ಪಡೆದರು.

ಪತ್ನಿ ಚೆನ್ನಮ್ಮ ಜತೆ ಸಿಎಂ ಬಸವರಾಜ ಬೊಮ್ಮಾಯಿ  ಆಗಮಿಸಿ  ಕುಕ್ಕೆ ಸುಬ್ರಹ್ಮಣ್ಯನಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.ಎದುರಾಳಿ ಯಾರು ಅನ್ನೋದು ನನಗೂ ಮುಖ್ಯ cm bommai cm bommai 4

ಇನ್ನು ಶಿಗ್ಗಾಂವಿ ಕ್ಷೇತ್ರದಲ್ಲಿ ತಮ್ಮ ವಿರುದ್ಧ ವಿನಯ್ ಕುಲಕರ್ಣಿ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ಎದುರಾಳಿ ಯಾರು ಅನ್ನೋದು ನನಗೂ ಮುಖ್ಯ. ವಿನಯ್ ಕುಲಕರ್ಣಿ ಟಾರ್ಗೆಟ್ ಅಲ್ಲ.  ನನ್ನ ಮೇಲೆ ಕ್ಷೇತ್ರದ ಜನ ವಿಶ್ವಾಸವಿಟ್ಟಿದ್ದಾರೆ ಎಂದರು.

Key words: CM- Basavaraja Bommai-visit-kukke subramhanya swamy temple