Sunday, September 20, 2026

BDA Apartments

ಕಾಂಗ್ರೆಸ್ ಟಿಕೆಟ್ ಮಿಸ್: ಮತ್ತೆ ಜೆಡಿಎಸ್ ಕದ ತಟ್ಟಿದ ವೈಎಸ್ ವಿ ದತ್ತಾ BDA JK_Adv BD...
Home Front Page ಕಾಂಗ್ರೆಸ್ ಟಿಕೆಟ್ ಮಿಸ್: ಮತ್ತೆ ಜೆಡಿಎಸ್ ಕದ ತಟ್ಟಿದ ವೈಎಸ್ ವಿ ದತ್ತಾ.

ಕಾಂಗ್ರೆಸ್ ಟಿಕೆಟ್ ಮಿಸ್: ಮತ್ತೆ ಜೆಡಿಎಸ್ ಕದ ತಟ್ಟಿದ ವೈಎಸ್ ವಿ ದತ್ತಾ.

ಬೆಂಗಳೂರು,ಏಪ್ರಿಲ್,12,2023(www.justkannada.in):  ಕಡೂರು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆ ವೈಎಸ್ ವಿ ದತ್ತಾ ಮತ್ತೆ ಜೆಡಿಎಸ್ ಕದ ತಟ್ಟಿದ್ದಾರೆ.

ಇಂದು ಪದ್ಮನಾಭನಗರದಲ್ಲಿರುವ ಮಾಜಿಪ್ರಧಾನಿ ಹೆಚ್.ಡಿ ದೇವೇಗೌಡರ ನಿವಾಸಕ್ಕೆ ವೈಎಸ್ ವಿ ದತ್ತಾ ಭೇಟಿ ನೀಡಿದ್ದು, ಟಿಕೆಟ್ ನೀಡುವಂತೆ ಹೆಚ್.ಡಿ ದೇವೇಗೌಡರ ಬಳಿ ಮನವಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಕಾಂಗ್ರೆಸ್ ಟಿಕೆಟ್ ಮಿಸ್ ysv dutta

ಹೆಚ್.ಡಿ ದೇವೇಗೌಡರ ಮೂಲಕ ಮತ್ತೆ ಜೆಡಿಎಸ್ ಸೇರಲು ವೈಎಸ್ ವಿ ದತ್ತಾ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ. ಇತ್ತಿಚೆಗಷ್ಟೆ ವೈಎಸ್ ವಿ ದತ್ತಾ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ವೈಎಸ್ ವಿದತ್ತಾ ಕಡೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ವೈಎಸ್ ವಿ ದತ್ತಾಅವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ನಿರಾಕರಿಸಿದೆ.

Key words: YSV Datta –meet-Former PM-HD devegowda- JDS