Tuesday, August 4, 2026

BDA Apartments

Home Crime ಹೆಜ್ಜೇನು ದಾಳಿಗೆ ದನಗಾಹಿ ಸಾವು: ಇಬ್ಬರಿಗೆ ಗಾಯ.

ಹೆಜ್ಜೇನು ದಾಳಿಗೆ ದನಗಾಹಿ ಸಾವು: ಇಬ್ಬರಿಗೆ ಗಾಯ.

ಮೈಸೂರು,ಏಪ್ರಿಲ್,10,2023(www.justkannada.in): ಹೆಜ್ಜೇನು ಹುಳುಗಳ ದಾಳಿಗೆ  ದನಗಾಹಿ ಸಾವನ್ನಪ್ಪಿ ಮತ್ತಿಬ್ಬರಿಗೆ ಗಾಯಗಳಾಗಿರುವ ಘಟನೆ ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನಲ್ಲಿ ನಡೆದಿದೆ.

ಹೆಚ್.ಡಿ.ಕೋಟೆ ತಾಲೂಕಿನ ಹೊಸತೊರವಳ್ಳಿ ಮತ್ತು ಬೆಳಗನಹಳ್ಳಿ ಸಮೀಪದಲ್ಲಿಈ  ಘಟನೆ ನಡೆದಿದೆ. ಚಿಕ್ಕಮಾಲೇಗೌಡ (65) ಹೆಜ್ಜೇನು ದಾಳಿಗೆ ಸಿಲುಕಿ ಮೃತಪಟ್ಟ ವ್ಯಕ್ತಿ. ಬೀರೇಗೌಡ ಮತ್ತು ಶಂಕರನಾಯ್ಕ ಎಂಬುವವರು ಹೆಜ್ಜೇನು ದಾಳಿಯಲ್ಲಿ ಗಾಯಗೊಂಡಿದ್ದು,  ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ದನ ಮೇಯಿಸುತ್ತಿದ್ದಾಗ ಜೇನುಹುಳುಗಳು ಹಠಾತ್ ದಾಳಿ ನಡೆಸಿದ್ದು,  ಜೇನುದಾಳಿಯಿಂದ ತೀವ್ರವಾಗಿ ನಿತ್ರಾಣಗೊಂಡಿದ್ದ ಚಿಕ್ಕಮಾಲೇಗೌಡರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು ಈ ವೇಳೆ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಘಟನೆಯಿಂದ ಗ್ರಾಮಸ್ಥರು ಭಯಬೀತರಾಗಿದ್ದಾರೆ.

Key words: HD Kote-Hejjenu- attack-death-Two injured.