Sunday, August 23, 2026

BDA Apartments

Home Front Page ‘ದಿ ಎಲಿಫೆಂಟ್ ವಿಸ್ಪರರ್ಸ್’ನ ಬೊಮ್ಮ-ಬೆಳ್ಳಿ ದಂಪತಿ ಸನ್ಮಾನಿಸಿದ ಪ್ರಧಾನಿ ಮೋದಿ

‘ದಿ ಎಲಿಫೆಂಟ್ ವಿಸ್ಪರರ್ಸ್’ನ ಬೊಮ್ಮ-ಬೆಳ್ಳಿ ದಂಪತಿ ಸನ್ಮಾನಿಸಿದ ಪ್ರಧಾನಿ ಮೋದಿ

ಮೈಸೂರು, ಏಪ್ರಿಲ್ 09, 2023 (www.justkannada.in): ಮಧುಮಲೈನ  ತೆಪ್ಪಕಾಡು ಆನೆ ಶಿಬಿರಾಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಆನೆಗಳಿಗೆ ಕಬ್ಬು ನೀಡಿದರು.

ಬಳಿಕ ತೆಪ್ಪಕಾಡು ಶಿಬಿರದಲ್ಲಿರುವ ಆಸ್ಕರ್ ಪ್ರಶಸ್ತಿ ವಿಜೇತ ದಿ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯಚಿತ್ರದಲ್ಲಿರುವ ಬೊಮ್ಮ ಮತ್ತು ಬೆಳ್ಳಿ ದಂಪತಿ ಭೇಟಿ ಮಾಡಿ ಸನ್ಮಾನಿಸಿದರು.

ಬಳಿಕ ಅಲ್ಲಿಂದ ಮೈಸೂರಿನತ್ತ ಪ್ರಯಾಣ ಆರಂಭಿಸಿದರು.  ನಂತರ ಮೈಸೂರಿನ ಓವೆಲ್ ಮೈದಾನಕ್ಕೆ ಮೋದಿ ಆಗಮಿಸುವರು. ನಂತರ ಮಾನಸ ಗಂಗೋತ್ರಿಯ  ಕೆ.ಎಸ್.ಓ.ಯು ನ ಘಟಿಕೋತ್ಸವ ಭವನದ ಕಾರ್ಯಕ್ರಮದಲ್ಲಿ ಭಾಗಿಯಾಗುವರು.

ಕೆಎಸ್ ಓ ಯು ಘಟಿಕೋತ್ಸವ ಸಭಾಂಗಣದಲ್ಲಿ ಹುಲಿ ವರದಿ ಬಿಡುಗಡೆ, ಬಂಡಿಪುರ ಹುಲಿ ಯೋಜನೆ ನೆನಪಿನಾರ್ಥ ನಾಣ್ಯವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡುವರು.