Tuesday, August 4, 2026

BDA Apartments

Home Crime ಮೈಸೂರಿನ ಐಶ್(AIISH)  ಉದ್ಯೋಗಿ ಅನುಮಾನಸ್ಪದವಾಗಿ ಸಾವು.

ಮೈಸೂರಿನ ಐಶ್(AIISH)  ಉದ್ಯೋಗಿ ಅನುಮಾನಸ್ಪದವಾಗಿ ಸಾವು.

ಮೈಸೂರು,ಏಪ್ರಿಲ್,7,2023(www.justkannada.in): ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ ಉದ್ಯೋಗಿ ಹಾಸ್ಟೆಲ್ ನ ರೂಮ್ ನಲ್ಲಿ ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ.

ಐಶ್(AIISH)ನಲ್ಲಿ ಟೆಕ್ನಿಷಿಯನ್ ಆಗಿದ್ದ ಪ್ರಾಣೇಶ್(26) ಎಂಬುವವರೇ ಮೃತಪಟ್ಟವರು.  ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ  ಮೂಲದ ಪ್ರಾಣೇಶ್ ವಿಶೇಷಚೇತನರಾಗಿದ್ದರು. ಇವರು ವಿಜಯಶ್ರೀಪುರದ ವೆಂಕಟೇಶ್ವರ ವಿದ್ಯಾರ್ಥಿನಿಲಯದಲ್ಲಿ ತಂಗಿದ್ದರು.

ರೂಮ್ ನಲ್ಲಿ ಒಬ್ಬರೇ ಇದ್ದ ಅವರು ಅಲ್ಲಿಯೇ ಮೃತಪಟ್ಟಿದ್ದಾರೆ. ಸಾಕಷ್ಟು ಸಮಯ ಕಳೆದರೂ ಹೊರಗೆ ಬಾರದಿರುವುದನ್ನು ಗಮನಿಸಿದ ಹಾಸ್ಟೆಲ್ ನ ಇತರೇ ವಿದ್ಯಾರ್ಥಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು ತಕ್ಷಣ ಸ್ಥಳಕ್ಕೆ ಬಂದ ಜಯಲಕ್ಷ್ಮಿಪುರಂ  ಠಾಣಾ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು. ಸದ್ಯಕ್ಕೆ ಸಾವಿಗೆ ಕಾರಣ ತಿಳಿದು ಬಂದಿಲ್ಲ.

ಈ ಸಂಬಂಧ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಪೊಲೀಸರು ಹಸ್ತಾಂತರಿಸಿದ್ದಾರೆ.

Key words: Mysore- AIISH –employee- dies- suspiciously.